ಡಿ 20 (DaijiworldNews/PC): ಜೀವನದಲ್ಲಿ ಸಾಧನೆ ಮಾಡಲು ತುಡಿತ ಹಾಗೂ ಛಲವಿರಬೇಕು. ಸಾಧನೆಗೆ ಅಂಗವಿಕಲತೆ ಅಡ್ಡಿಯಲ್ಲ ಎಂಬುವುದನ್ನು ಸಾಧಿಸಿ ತೋರಿಸಿದವರು ಸೂರಜ್ ತಿವಾರಿ
ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ನಿವಾಸಿಯಾಗಿರುವ ಸೂರಜ್ ತಿವಾರಿ ಅವರು 2017 ರಲ್ಲಿ ಗಾಜಿಯಾಬಾದ್ನಲ್ಲಿ ಚಲಿಸುವ ರೈಲಿನಿಂದ ಬಿದ್ದು ತನ್ನ ಎರಡೂ ಕಾಲುಗಳು ಮತ್ತು ಬಲಗೈ ಮತ್ತು ಎಡಗೈಯ ಎರಡು ಬೆರಳುಗಳನ್ನು ಕಳೆದುಕೊಂಡಿದ್ದರು.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ ರಷ್ಯನ್ ಭಾಷೆಯಲ್ಲಿ ಎಂಎ ವ್ಯಾಸಂಗ ಮಾಡುತ್ತಿರುವ ಸೂರಜ್ ತನ್ನ ಮೊದಲ ಪ್ರಯತ್ನದಲ್ಲಿ UPSC ಸಿಎಸ್ಇ ತೇರ್ಗಡೆಯಾಗಿ 917ನೇ ರ್ಯಾಂಕ್ ಗಳಿಸಿದ್ದಾರೆ.
ಸೂರಜ್ನ ಯಶಸ್ಸಿನಿಂದ ಸಂತಸ ವ್ಯಕ್ತಪಡಿಸಿದ ಅವರ ತಂದೆ ರಮೇಶ್ ತಿವಾರಿ, " ಮಗ ಸೂರಜ್ ನನ್ನನ್ನು ಹೆಮ್ಮೆ ಪಡುವಂತೆ ಮಾಡಿದ್ದಾನೆ ಆತನ ಯಶಸ್ವಿಗೆ ಅವನಲ್ಲಿ ಉಳಿದುಕೊಂಡಿರುವ ಮೂರು ಬೆರಳುಗಳು ಸಾಕು' ಎಂದು ಹೇಳಿದ್ದಾರೆ.
" ನನ್ನ ಮಗ ತುಂಬಾ ಧೈರ್ಯಶಾಲಿ. ತನ್ನ ಹಠ ಎಂದಿಗೂ ಬಿಡಲಿಲ್ಲ ಹಾಗೂ ತನ್ನ ಜೀವನದಲ್ಲಿ ಯಶಸ್ವಿಯಾಗಲು ಶ್ರಮಿಸಿದ್ದಾನೆ" ಎಂದು ಆತನ ಯಶಸ್ವಿಗೆ ತಾಯಿ ಸಂತಸಪಟ್ಟಿದ್ದಾರೆ.