ಬೆಂಗಳೂರು, ಡಿ 20 (DaijiworldNews/MS): ಮಹಾರಾಷ್ಟ್ರ ತಿರುಗಾಟದಲ್ಲಿದ್ದ ದಕ್ಷಿಣ ಕೊರಿಯಾದ ಮಹಿಳಾ ಯೂಟ್ಯೂಬರ್ ಜೊತೆ ಅನುಚಿತವಾಗಿ ವರ್ತಿಸಿದ್ದ ಜೊತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ್ಲಿ ಎನ್ನುವ ಕೊರಿಯನ್ ಯೂಟ್ಯೂಬರ್ ಯುವತಿ ಇತ್ತೀ ಚೆಗೆ ಮುಂಬೈ ಹಾಗೂ ಪುಣೆಗೆ ತೆರಳಿ ಅಲ್ಲಿನ ಸ್ಥಳೀಯ ಜನಜೀವನದ ಬಗ್ಗೆ ವಿಡಿಯೊ ಮಾಡುತ್ತಿದ್ದರು. ಪುಣೆಯಲ್ಲಿ ವಿಡಿಯೊ ಮಾಡುವಾಗ ಬಟ್ಟೆ ಅಂಗಡಿ ಒಂದರ ಬಳಿ ಯುವಕನೊಬ್ಬ ಕೆಲ್ಲಿ ಕೊರಳಿಗೆ ಕೈ ಹಾಕಿ ಬಿಗಿಯಾಗಿ ಹಿಡಿದುಕೊಂಡಿದ್ದಲ್ಲದೇ ತನ್ನ ಸಹವರ್ತಿಯೊಬ್ಬನಿಗೆ ಹೀ ಗೆ ಗಟ್ಟಿಯಾಗಿ ಹಿಡಿದುಕೊಳ್ಳಬೇಕು ಎಂದು ಪ್ರಚೋದಿಸಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ
ಈ ಘಟನೆ ವಿಡಿಯೊದಲ್ಲಿ ದಾಖಲಾಗಿದ್ದು ಕೆಲ್ಲಿ ವಿಡಿಯೊ ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅನೇ ಕ ನೆಟ್ಟಿಗರು ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು ಇದು ವೈರಲ್ ಆಗಿತ್ತು.
“ಘಟನೆಯು ನಮ್ಮ ಗಮನಕ್ಕೆ ಬಂದಾಗ, ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ. ನಾವು ಇಂದು ಶಂಕಿತನನ್ನು ಬಂಧಿಸಿದ್ದೇವೆ ಮತ್ತು ಆತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ ಪಿಂಪ್ರಿ ಚಿಂಚ್ವಾಡ್ ಪೊಲೀಸ್ ಕಮಿಷನರ್ ವಿನೋಯ್ ಕುಮಾರ್ ಚೌಬೆ ಹೇಳಿದ್ದಾರೆ.
ಕೆಲ್ಲಿ ಕೆಲವು ದಿನಗಳ ಹಿಂದೆ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು ಭಾರತದಲ್ಲಿ ಏಕಾಂಗಿ ಮಹಿಳೆ ಪ್ರಯಾಣ ಮಾಡಿದಾಗ ಬೀದಿಯಲ್ಲಿ ಹೀಗೂ ನಡೆಯಬಹುದು ' ಎಂಬ ಶೀರ್ಷಿಕೆ ನೀಡಿದ್ದರು.