ನವದೆಹಲಿ, ಡಿ 21 (DaijiworldNews/MS): ಭಾರತೀಯ ಕುಸ್ತಿ ಫೆಡರೇಷನ್ ನೂತನ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆಯಾಗಿದ್ದಾರೆ.
ಈ ಹಿಂದೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದು ವಿವಾದಕ್ಕೀಡಾಗಿದ್ದ ಡಬ್ಲ್ಯುಎಫ್ಐನ ನಿರ್ಗಮಿತ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತರಾಗಿದ್ದಾರೆ . 11 ತಿಂಗಳ ನಂತರ ಸಂಸ್ಥೆಯ ಚುನಾವಣೆ ಅಂದರೆ ಇಂದು ಚುನಾವಣೆ ನಡೆದಿದ್ದು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಸಂಜಯ್ ಸಿಂಗ್ ಆಯ್ಕೆಯಾಗಿದ್ದಾರೆ.
ಸಂಜಯ್ ಸಿಂಗ್ ಅಧ್ಯಕ್ಷ ಸ್ಥಾನಕ್ಕೆ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಮತ್ತು ಸಂಜಯ್ ನಡುವೆ ಪೈಪೋಟಿ ನಡೆದಿತ್ತು.