ಕೊಪ್ಪಳ,ಏ 19(Daijiworld News/AZM):ಲೋಕಸಭಾ ಚುನಾವಣೆ ಮುಗಿದಂತೆ ಮೈತ್ರಿ ಸರಕಾರ ಪತನವಾಗಲಿದ್ದು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಶಾಸಕ ರಾಜು ಗೌಡ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇ 23 ರಂದು ಸಂಜೆ 6 ಗಂಟೆಗೆ ಸರ್ಕಾರಕ್ಕೆ ವಿಚ್ಛೇದನ ಆಗಲಿದೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗುವುದು ಖಚಿತ. ಮೇ 23ರ ಬಳಿಕ ಸಿಎಂ ಮತ್ತೆ ಕಣ್ಣೀರು ಹಾಕಲಿದ್ದಾರೆ ಎಂದು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ನವರೇ ಸರ್ಕಾರವನ್ನು ಕೆಡವುತ್ತಾರೆ. ಪಾರ್ಲಿಮೆಂಟ್ ಎಲೆಕ್ಷನ್ ವರೆಗೂ ದೋಸ್ತಿಗಳ ನಡುವೆ ಅಗ್ರಿಮೆಂಟ್ ಆಗಿದೆ. ಒಲ್ಲದ ಮನಸ್ಸಿನಿಂದ ಜೆಡಿಎಸ್ ನೊಂದಿಗೆ ಸಿದ್ದರಾಮಯ್ಯ ಮೈತ್ರಿ ಮಾಡಿಕೊಂಡಿದ್ದಾರೆ. ಎಂಪಿ ಎಲೆಕ್ಷನ್ ವರೆಗೂ ದೋಸ್ತಿಗಳ ಅಗ್ರಿಮೆಂಟ್ ಆಗಿರುವುದರಿಂದ ಚುನಾವಣೆ ಮುಗಿಯುತ್ತಿದ್ದಂತೆ ಡೈವೋರ್ಸ್ ಗೆ ಅರ್ಜಿ ಸಲ್ಲಿಸಲಿದ್ದಾರೆ. ಮೇ 23 ರ ಸಂಜೆಗೆ ಡೈವೋರ್ಸ್ ಸಿಗಲಿದೆ ಎಂದು ಹೇಳಿದ್ದಾರೆ.