ಬೆಂಗಳೂರು, ಡಿ 23 (daijiworldNews/MR): ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 104 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 271ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿನಿಂದ ಗುಣಮುಖರಾಗಿ 8 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದು ವರದಿಯಾಗಿದೆ.
ಬೆಂಗಳೂರಿನಲ್ಲಿ ಒಟ್ಟು ಕೊರೊನಾ ಸಕ್ರಿಯ ಪ್ರಕರಣಗಳು 234, ಮೈಸೂರು 12, ಶಿವಮೊಗ್ಗ 6, ರಾಮನಗರ 3, ಬಳ್ಳಾರಿ 2, ಚಾಮರಾಜನಗರ 2, ಚಿಕ್ಕಮಗಳೂರು 4, ದಕ್ಷಿಣ ಕನ್ನಡ 3, ಮಂಡ್ಯ 2 ಹಾಗೂ ತುಮಕೂರಿನಲ್ಲಿ 2 ಕೇಸ್ಗಳು ದಾಖಲಾಗಿವೆ.
ಒಟ್ಟು 271 ಸೋಂಕಿತರಲ್ಲಿ 258 ಮಂದಿ ಹೋಮ್ ಐಸೋಲೇಶನಲ್ಲಿ ಇದ್ದು, 13 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯಾದ್ಯಂತ ಕೊರೊನಾ ಪಾಸಿಟಿವಿಟಿ ದರ ಶೇ. 5.93 ದಾಖಲಾಗಿವೆ.
ರಾಜ್ಯಾದ್ಯಂತ ಇಂದು ಒಟ್ಟು 1,752 ಮಂದಿಗೆ ಕೋವಿಡ್ ತಪಾಸಣೆ ನಡೆಸಲಾಗಿದ್ದು, ಈ ಪೈಕಿ 104 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು ಬೆಂಗಳೂರಿನಲ್ಲಿ 85 ಪ್ರಕರಣಗಳು ಪತ್ತೆಯಾಗಿದ್ದು, ಚಾಮರಾಜನಗರ 2, ದಕ್ಷಿಣ ಕನ್ನಡ 1, ಮಂಡ್ಯ 1, ಮೈಸೂರು 7, ಶಿವಮೊಗ್ಗ 6, ತುಮಕೂರು 2 ಪ್ರಕರಣ ಪತ್ತೆಯಾಗಿವೆ.