ಡಿ 2 (DaijiworldNews/SK): ಪ್ರತಿಯೊಬ್ಬ ಸಾಧಕರ ಹಿಂದೆಯೂ ಒಂದೊಂದು ರೋಚಕ ಕಥೆ ಇರುತ್ತದೆ. ನಮ್ಮ ಜೀವನದಲ್ಲಿ ನಡೆದ ಕೆಲ ಘಟನೆಗಳು ನಮ್ಮನ್ನು ಕುಂಠಿತಗೊಳಿಸಿದರೆ ಕೆಲವೊಂದು ವಿಚಾರಗಳು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಆದರೆ ರೀತಿ ಶಶಾಂಕ್ ತ್ರಿಪಾಠಿ ಕೂಡ ತಮ್ಮ ಜೀವನದಲ್ಲಿ ಆದ ಘಟನೆಯ ಬಳಿಕ ಏನನ್ನಾದರೂ ಸಾಧಿಸಲೇಬೇಕು ಎಂದು ನಿರ್ಧರಿಸಿ ಯುಪಿಎಸ್ ಸಿ ಬರೆದು 5ನೇ ರ್ಯಾಂಕ್ನೊಂದಿಗೆ ಐಎಎಸ್ ಅಧಿಕಾರಿಯಾದವರ ಯಶೋಗಾಥೆ.
ಪ್ರಸ್ತುತ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿಶೇಷ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸುತ್ತಿರುವ ಶಶಾಂಕ್ ತ್ರಿಪಾಠಿ ಉತ್ತರಪ್ರದೇಶದ ಕಾನ್ಪುರದ ನಿವಾಸಿ. ಶಶಾಂಕ್ ತಮ್ಮ ಆರಂಭಿಕ ಶಿಕ್ಷಣವನ್ನು ಕಾನ್ಪುರದಲ್ಲೇ ಮುಗಿಸಿ 2013 ರಲ್ಲಿ ಐಐಟಿಯನ್ನು ಪದವಿ ಪಡೆದರು.
ಶಶಾಂಕ್ ಅವರಿಗೆ ವ್ಯಾಸಂಗದ ಸಮಯದಲ್ಲಿ ಕಹಿ ಘಟನೆಯೊಂದು ನಡೆದು ಹೋಯಿತು. ತಮ್ಮ ಪ್ರೇಮ ವೈಫಲ್ಯದ ನಡುವೆಯು ದೃಢ ನಿರ್ಧಾರ ತೆಗೆದುಕೊಂಡು ಯುಪಿಎಸ್ ಸಿ ಪರೀಕ್ಷೆ ಬರೆಯಲು ಮುಂದಾದರೂ.
ಇನ್ನು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮುಂದಾದ ಶಶಾಂಕ್ ಅವರು . 2014 ರಲ್ಲಿ UPSC ಯ ಮೊದಲ ಪ್ರಯತ್ನದಲ್ಲಿ 272 ನೇ ರ್ಯಾಂಕ್ ಪಡೆದರು. ಆದರೆ ಇದ್ದರಿಂದ ತೃಪ್ತಿಗೊಳ್ಳದ ಅವರು ಮರು ಪರೀಕ್ಷೆ ಬರೆಯಲು ತಯಾರಿ ನಡೆಸಿ ಎರಡನೇ ಪ್ರಯತ್ನದಲ್ಲಿ 5ನೇ ರ್ಯಾಂಕ್ನೊಂದಿಗೆ ತೇರ್ಗಡೆಯಾಗಿದ್ದಾರೆ.
ಈ ಮೂಲಕ ಪ್ರೀತಿ ಪ್ರೇಮ ಕೈಕೊಟ್ಟಾಗ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳುವವರಿಗೆ ಶಶಾಂಕ್ ಸ್ಫೂರ್ತಿಯಾಗಿದ್ದಾರೆ. ತನ್ನ ಪ್ರೀತಿ ಕೈಕೊಟ್ಟರೂ ಕೂಡಾ ಅದರ ಬಗ್ಗೆ ಚಿಂತಿಸದೆ ತನ್ನ ಜೀವನದಲ್ಲಿ ಸಾಧನೆಗೈದು ಇಂದಿನ ಯುವ ಜನತೆಗೆ ಮಾದರಿಯಾಗಿದ್ದಾರೆ.