ಬೆಳಗಾವಿ, ಎ20(Daijiworld News/SS): ಮೋದಿಅಡ್ವಾಣಿಯನ್ನುತಿರುಗಿಯೂನೋಡುತ್ತಿಲ್ಲ. ಕೇವಲಹಣದಬಗ್ಗೆಮಾತನಾಡುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಗುರುವಿಗೆ ಮೊದಲ ಆದ್ಯತೆ. ಎಲ್.ಕೆ. ಅಡ್ವಾಣಿಯವರು ಮೋದಿಯನ್ನು ನಿಲ್ಲಿಸಿದರು. ಆದರೆ ಮೋದಿ ಅಡ್ವಾಣಿಯನ್ನು ತಿರುಗಿಯೂ ನೋಡುತ್ತಿಲ್ಲ. ಕೇವಲ ಹಣದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ಹಣ ಲೂಟಿ ಮಾಡಿರುವ ಉದ್ಯಮಿಗಳಾದ ಅನಿಲ ಅಂಬಾನಿ, ನೀರವ ಅಂಬಾನಿ, ವಿಜಯ ಮಲ್ಯ ಅವರ ಜೇಬಿನಿಂದ ಹಣ ತಂದು ದೇಶದ ಜನರಿಗೆ ಹಂಚುತ್ತೇವೆ. ದೇಶದ ರೈತರ ಸಾಲ ಮಾಡ್ತೇವೆ. ಬಡ ಕುಟುಂಬಗಳ ಬ್ಯಾಂಕ್ ಖಾತೆಗೆ ಪ್ರತಿ ವರ್ಷ 72 ಸಾವಿರ ರೂ. ಬರಲಿದೆ ಎಂದು ಹೇಳಿದರು.
ಮೋದಿಐದುವರ್ಷಜನರಿಗೆಅನ್ಯಾಯಮಾಡಿದ್ದಾರೆ. ರೈತಸಾಲಮನ್ನಾಮಾಡಿಎಂದರೆಮೋದಿಅವರುತನ್ನಕೆಲಸಅಲ್ಲಅಂತಾ ಹೇಳುತ್ತಿದ್ದಾರೆ. ಅನಿಲಅಂಬಾನಿ, ಅದಾನಿಯಂಥ 10ರಿಂದ 15 ಉದ್ಯಮಿಗಳ 3.2 ಲಕ್ಷಕೋಟಿಸಾಲಮನ್ನಾಮಾಡಿದ್ದಾರೆ. ರೈತರಿಗೆಹಣಕೊಡುವುದಿಲ್ಲಎನ್ನುತ್ತಿದ್ದಾರೆಎಂದುದೂರಿದರು.
ಮೋದಿ ಅವರು ತಮ್ಮನ್ನು ಪ್ರಧಾನಿ ಮಾಡಬೇಡಿ. ಚೌಕಿದಾರ್ ಮಾಡಿ ಅಂತಾರೆ. ಬಡ ರೈತರ ಮನೆ ಮುಂದೆ ಚೌಕಿದಾರ ಎಂದೂ ಇರುವುದಿಲ್ಲ. ಅನಿಲ ಅಂಬಾನಿಯಂಥವರ ಮನೆ ಬಳಿಯೇ ಚೌಕಿದಾರಗಳ ಸಾಲು ಇರುತ್ತದೆ. ಮೋದಿ ದೇಶದ ಚೌಕಿದಾರ ಅಲ್ಲ. ಅವರು ಅನಿಲ ಅಂಬಾನಿ ಅವರ ಚೌಕಿದಾರ ಎಂದು ಆಕ್ರೋಶದಿಂದ ನುಡಿದರು.