ಬೆಂಗಳೂರು,ಡಿ 25 (DaijiworldNews/PC ): ಇಡೀ ದೇಶದಲ್ಲಿ ಮಾರ್ಗಸೂಚಿ ಜಾರಿ ಇಲ್ಲ. ಜನ ಗುಂಪಾಗಿ ಸೇರಬಾರದು, ಕಾರ್ಯಕ್ರಮ ಮಾಡಬಾರದು ಎಂದು ನಿಯಮ ಇರಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಕೊರೊನಾ ಹೊಸ ರೂಪಾಂತರಿಯಾದ ಜೆಎನ್.1 ವೈರಸ್ ದಿನೇ ದಿನೇ ಹೆಚ್ಚುತ್ತಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಾಳೆ ಜಿಲ್ಲಾವಾರು ಮಾಹಿತಿ ನೀಡಲಾಗುತ್ತದೆ. ನಾಳೆ ಸಬ್ ಕಮಿಟಿ ಸಭೆ ಇದೆ. ಅದರಲ್ಲಿ ಈ ಕುರಿತು ಚರ್ಚೆ ಮಾಡಲಾಗುತ್ತದೆ. ತಜ್ಞರ ಜೊತೆ ಉಪ ಸಮಿತಿ ಸಭೆ ಮಾಡಲಾಗುತ್ತದೆ ಎಂದರು
ಬಹುತೇಕ ಕೇಸ್ಗಳು ಬೆಂಗಳೂರಲ್ಲೇ ಇರುವ ಸಾಧ್ಯತೆಯಿದೆ. ಸಭೆಯ ಬಳಿಕ ಮುಂದಿನ ರೂಲ್ಸ್ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಸದ್ಯ ಆತಂಕಗೊಳ್ಳುವ ಅಗತ್ಯವಿಲ್ಲ. ಜೆಎನ್.1ರಿಂದಲೇ ಕೊರೊನಾ ಸಂಖ್ಯೆ ಏರಿಕೆಯಾಗುತ್ತಿದೆ. ಹೊಸ ವರ್ಷದ ಆಚರಣೆಗೆ ನಾಳೆಯ ಸಭೆಯ ಬಳಿಕ ತಿಳಿಸುತ್ತೇವೆ. ಸದ್ಯಕ್ಕೆ ಯಾವುದೇ ರೂಲ್ಸ್ ಇಲ್ಲ ಎಂದರು.