ನವದೆಹಲಿ, ಡಿ 26 (DaijiworldNews/MR): ಸಮಾಜವಾದಿ ಪಾರ್ಟಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಹಿಂದೂ ಧರ್ಮದ ವಿರುದ್ಧ ವಿವಾದಿತ ಹೇಳಿಕೆ ನೀಡಿ ಸಮಾಜವಾದಿ ಪಾರ್ಟಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಿಂದುತ್ವದ ವಿರುದ್ಧ ಮಾತನಾಡಿರುವ ಅವರು, ಹಿಂದೂ ಧರ್ಮವಲ್ಲ, ಅದು ವಂಚನೆ, ಇದೇ ಹಿಂದೂ ಧರ್ಮ ಕೆಲವರಿಗೆ ದಂಧೆಯಾಗಿದೆ ಎಂದು ಹೇಳಿದ್ದಾರೆ.
ಅವರು ತಮ್ಮ ಭಾಷಣದಲ್ಲಿ ಹಿಂದೂ ಧರ್ಮದ ಕುರಿತು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರಧಾನಿ ನರೇಂದ್ರ ಮೋದಿ, ಸಚಿವ ನಿತಿನ್ ಗಡ್ಕರಿ ಹೇಳಿದ ಮಾತುಗಳನ್ನು ಉಲ್ಲೇಖಿಸಿ ಈ ವಿವಾದಾತ್ಮ ಹೇಳಿಕೆ ನೀಡಿದ್ದಾರೆ.
ಹಿಂದೂ ಒಂದು ಧರ್ಮವಲ್ಲ, ಅದು ಜೀವನ ಪದ್ಧತಿ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮೋದಿ ಕೂಡ ಹಿಂದೂ ಧರ್ಮ ಇಲ್ಲ ಎಂದಿದ್ದಾರೆ. ಇದು ಯಾರ ಭಾವನೆಗೂ ಧಕ್ಕೆಯಾಗಲಿಲ್ಲ. ಆದರೆ ಸ್ವಾಮಿ ಪ್ರಸಾದ್ ಮೌರ್ಯ ಏನಾದರು ಹೇಳಿದರೆ ಧಾರ್ಮಿಕ ಭಾವನೆಗೆ ಧಕ್ಕೆ, ವಿವಾದಾತ್ಮಕ ಹೇಳಿಕೆಯಾಗುತ್ತದೆ ಎಂದು ಮೌರ್ಯ ಕಿಡಿ ಕಾರಿದ್ದಾರೆ. ಇದೀಗ ಸ್ವಾಮಿ ಪ್ರಸಾದ್ ಮೌರ್ಯ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.