ಹೈದರಾಬಾದ್, ಡಿ 27 (DaijiworldNews/MR): ಕಾರ್ತಿಕ್ ಮಧಿರಾ ಅವರು ಅಂಡರ್-13, ಅಂಡರ್-15, ಅಂಡರ್-17, ಮತ್ತು ಅಂಡರ್-19 ಹಂತಗಳಲ್ಲಿ ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಆಡಿದ ಒಬ್ಬ ಕ್ರಿಕೆಟ್ ಆಟಗಾರ. ಆದರೆ ಅವರ ವೃತ್ತಿಜೀವನವು ಅನಿರೀಕ್ಷಿತ ತಿರುವು ಪಡೆಯುವ ಮೂಲಕ ಕಾರ್ತಿಕ್ ಅವರು ಐಪಿಎಸ್ ಆದ ಕಥೆ ಇದಾಗಿದೆ.
ಹೈದರಾಬಾದ್ನವರಾದ ಕಾರ್ತಿಕ್ ಮಧಿರಾ . ಭಾರತೀಯ ಪೊಲೀಸ್ ಸೇವೆಗೆ ಪ್ರವೇಶಿಸುವ ಮೊದಲು ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದವರು. ಕ್ರಿಕೆಟ್ ಆಟಗಾರನಾದ ಕಾರ್ತಿಕ್ IPS ಆಕಾಂಕ್ಷಿಯಾಗುವುದರ ಹಿಂದೆ ವೈಯಕ್ತಿಕ ಕಾರಣಗಳು ಇರಬಹುದು ಎಂದು ಹೇಳಲಾಗಿದೆ. ಈ ಅವಧಿಯಲ್ಲಿ ಅವರು ಆರು ತಿಂಗಳ ಕಾಲ ಕೆಲಸ ಮಾಡಿ ನಂತರ ಜನರಿಗಾಗಿ ಏನಾದರೂ ಮಾಡಬೇಕು ಎಂಬ ಇಚ್ಛೆಯಿಂದ ನಾಗರಿಕ ಸೇವೆಗಳನ್ನು ಮಾಡುವಲ್ಲಿ ಆಸಕ್ತಿ ಹೆಚ್ಚಿಸಿಕೊಂಡರು.
ಕಾರ್ತಿಕ್ ತನ್ನ UPSC ಪ್ರಯತ್ನಗಳಲ್ಲಿ ಆರಂಭಿಕ ಹಿನ್ನಡೆಯನ್ನು ಎದುರಿಸಿದರು, ಪ್ರಾಥಮಿಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗದಿರುವುದು ಸೇರಿದಂತೆ ಮೊದಲ ಮೂರು ಪ್ರಯತ್ನಗಳಲ್ಲಿ ವಿಫಲರಾದರು. ಆದಾಗ್ಯೂ, ಅವರು ತಮ್ಮ ತಯಾರಿಯಲ್ಲಿ ಮುಂದುವರಿದರು, ವಿಶೇಷವಾಗಿ ಅವರ ಐಚ್ಛಿಕ ವಿಷಯವಾದ ಸಮಾಜಶಾಸ್ತ್ರದ ಮೇಲೆ ಹೆಚ್ಚಿನ ನಿಗಾ ವಹಿಸಿದರು.
UPSC ಯ ವಿವಿಧ ಸುತ್ತುಗಳಿಗೆ ಪ್ರತ್ಯೇಕವಾಗಿ ತಯಾರಿ ಮಾಡುವ ಬದಲು, ಕಾರ್ತಿಕ್ ಏಕಕಾಲದಲ್ಲಿ ಸಮಗ್ರವಾಗಿ ತಯಾರಿ ನಡೆಸುವ ವಿಧಾನವನ್ನು ಆರಿಸಿಕೊಂಡರು, ಅವರ ಕಾರ್ಯತಂತ್ರದ ವಿಧಾನ, ನಿರಂತರ ಪರಿಷ್ಕರಣೆಯಿಂದ ಹಲವಾರು ಟೆಸ್ಟ್ ಸರಣಿಗಳನ್ನು ಪರಿಹರಿಸುವುದು ಅವರ ಯಶಸ್ಸಿಗೆ ಕಾರಣವಾಯಿತು.
UPSC 2019 ರ ಪರೀಕ್ಷೆಯಲ್ಲಿ, ಅವರ ನಾಲ್ಕನೇ ಪ್ರಯತ್ನದಲ್ಲಿ, ಕಾರ್ತಿಕ್ ಶ್ಲಾಘನೀಯ 103 ನೇ ರ್ಯಾಂಕ್ ಗಳಿಸುವ ಮೂಲಕ ಯಶಸ್ಸನ್ನು ಕಂಡರು ಹಾಗೂ ತಮ್ಮ ಕನಸಿನ ಐಪಿಎಸ್ ಅನ್ನು ನನಸು ಮಾಡಿಕೊಂಡರು. ವರದಿಗಳ ಪ್ರಕಾರ, ಅವರು ಪ್ರಸ್ತುತ ಮಹಾರಾಷ್ಟ್ರ ಕೇಡರ್ನಲ್ಲಿ ನಿಯೋಜಿಸಲ್ಪಟ್ಟಿದ್ದಾರೆ ಎನ್ನಲಾಗಿದೆ.