ಬೀದರ್ , ಡಿ 27 (DaijiwordNews/AK): ನಗರದ ಹಾರೂರಗೇರಿಯ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಎದುರುಗಡೆ ಒಂದೂವರೆ ವರ್ಷದ ಮಗು ಆಟವಾಡುತಿದ್ದಾಗ ಕಾರೊಂದು ಹರಿದು, ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಹಾರೂರಗೇರಿ ನಿವಾಸಿಗಳಾ ದ ಸಂಗೀತಾ ಸತೀಷ ಪಾಟೀಲ ದಂಪತಿಗಳ ಪುತ್ರ ಬಸವಚೇತನ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.
ಕೆಲ ತಿಂಗಳುಗಳ ಹಿಂದೆ ಮಗುವಿನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿತ್ತು. ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತ ಕಾರು ಚಲಾಯಿಸಿ ಹಿನ್ನಲೆ ಮಗುವಿನ ಮೇಲೆ ಕಾರು ಹರಿದ ವಿಷಯ ಆತನಿಗೆ ತಿಳಿದಿಲ್ಲ. ಪಕ್ಕದಲ್ಲೇ ಇನ್ನೊಂದು ಕಾರು ನಿಂತಿದ್ದು, ಆ ಕಾರು ಚಾಲಕ ನೋಡಿದ್ದಾನೆ. ತಕ್ಷಣವೇ ಮಗುವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.
ಆದರೆ ಮಗುವಿನ ಪ್ರಾಣ ಅದಾಗಲೇ ಹೋಗಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಾರನ್ನು ದಸ್ತಗಿರಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.