ದೆಹಲಿ, ಡಿ 28 (DaijiworldNews/AK): ಆನೆಯೊಂದು ಗೇಟ್ ನಿಂದ ಕೆಳಗಿಳಿದು ಆವರಣದೊಳಗೆ ನುಗ್ಗಿದ ಘಟನೆ ಉತ್ತರಾಖಂಡದ ಹರಿದ್ವಾರದ ರೋಶನಾಬಾದ್ ಪ್ರದೇಶದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬುಧುವಾರ ನಡೆದಿದೆ.
ಹತ್ತಿರದ ರಾಜಾಜಿ ರಕ್ಷಿತಾರಣ್ಯದಿಂದ ಹೊರಬಂದಿದೆ ಎನ್ನಲಾದ ಆನೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಮತ್ತು ನ್ಯಾಯಾಲಯದ ಆವರಣದಲ್ಲಿ ಸಂಚರಿಸುತ್ತಿದ್ದಂತೆ ಜನರಲ್ಲಿ ಗಾಬರಿಗೊಂಡರು. ಆನೆ ಗೇಟ್ ಗಳನ್ನು ಮುರಿದು ಗೋಡೆಯನ್ನು ಹಾನಿಗೊಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇದೀಗ ಘಟನೆಯ ವಿಡಿಯೊಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆನೆಯು ನ್ಯಾಯಾಲಯದ ಆವರಣವನ್ನು ಪ್ರವೇಶಿಸುವ ಮೊದಲು ಮುಖ್ಯ ದ್ವಾರದಿಂದ ಕೆಳಗಿಳಿದು ತಿರುಗಾಡುವುದನ್ನು ಕಾಣಬಹುದು.
ಆನೆ ಇರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಆನೆಯನ್ನು ಹೆದರಿಸಿ ಸದ್ಯ ರಾಜಾಜಿ ಹುಲಿ ಸಂರಕ್ಷಿತ ಅರಣ್ಯಕ್ಕೆ ಆನೆಯನ್ನು ಓಡಿಸಿದ್ದಾರೆ.