ಬೆಂಗಳೂರು, ಜ 01 (DaijiworldNews/HR): ಭಾನುವಾರ ರಾತ್ರಿ ಬೆಂಗಳೂರಿನಾದ್ಯಂತ ಹೊಸ ವರ್ಷಾಚರಣೆ ಸಂಭ್ರಮಾಚರಣೆ ಜೋರಾಗಿ ನಡೆದಿದ್ದು, ಈ ವೇಳೆ ಕೆಲವೊಂದು ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ.
ಹೊಸ ವರ್ಷಾಚರಣೆಯ ಜನದಟ್ಟಣೆಯ ನಡುವೆ ಸಿಲುಕಿಕೊಂಡ ಮಹಿಳೆಯೊಬ್ಬರು ಅಸ್ವಸ್ಥಗೊಂಡಿದ್ದು, ತಕ್ಷಣ ಅಲ್ಲಿದ್ದ ಮಹಿಳಾ ಪೊಲೀಸರು ಆಗಮಿಸಿ ಮಹಿಳೆಯನ್ನಿ ಆರೈಕೆ ಮಾಡಿದ್ದಾರೆ.
ಇತ್ತ ಯುವತಿಯೊಬ್ಬಳಿಗೆ ಯುವಕನೊಬ್ಬ ನೂಕುನುಗ್ಗಲಿನಲ್ಲಿ ಅಸಹ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದು, ಯುವತಿಯ ಪ್ರಿಯಕರ ಆಕ್ರೋಶಗೊಂಡು ಕಿರುಕುಳ ನೀಡಿದವನಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.
ನಗರದ ಸಂಭ್ರಮಾಚರಣೆ ನಡೆಯುವ ವಿವಿಧ ಸ್ಥಳಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.