ಹುಬ್ಬಳ್ಳಿ/ಧಾರವಾಡ, ಜ 01 (DaijiworldNews/HR): ಶಿಕ್ಷಕಿ ಕೆಲಸಕ್ಕೆಂದು ಯುವತಿಯೊಬ್ಬಳನ್ನು ಕರೆದೊಯ್ದು ನಿರಂತರ ಅತ್ಯಾಚಾರ ನಡೆಸಿ ಜೈಲು ಪಾಲಾಗಿರುವ ಮೌಲ್ವಿ ಪ್ರಕರಣದಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರ ಬಿದ್ದಿದೆ.
ಆರೋಪಿ ಗುಲಾಮ ಜಿಲಾನಿ ಅಜಹರಿ ಭಾರತೀಯನೇ ಅಲ್ಲ ಎನ್ನಲಾಗಿದ್ದು, ಈತ ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ದೇಶದಲ್ಲಿ ನೆಲೆಸಿದ್ದ ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ನೇಪಾಳ ಪೌರತ್ವ ಹೊಂದಿರುವ ಆರೋಪಿ, ಮಧ್ಯಪ್ರದೇಶದಲ್ಲಿ ಆರು ವರ್ಷಗಳ ಹಿಂದೆ ಬಂದು ನೆಲೆಸಿದ್ದ. ಇಲ್ಲಿಗೆ ಬಂದ ಮೇಲೆ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಮತದಾರರ ಚೀಟಿ ಮಾಡಿಸಿಕೊಂಡಿದ್ದಾನೆ.
ಇನ್ನು ಭಾರತದ ಅನೇಕ ರಾಜ್ಯಗಳಲ್ಲಿ ಓಡಾಡಿಕೊಂಡಿದ್ದ ಈತ ಧಾರ್ಮಿಕ ಪ್ರವಚನ ನೀಡಿ ಜನಮನ್ನಣೆ ಗಳಿಸಿದ್ದ. ಅಲ್ಲದೇ ಭಾರತದ ಹೆಸರಾಂತ ಧಾರ್ಮಿಕ ಪ್ರವಚನಕಾರರ ವಿರುದ್ಧ ಹೇಳಿಕೆ ಕೊಡುತ್ತಿದ್ದ ಎನ್ನಲಾಗಿದೆ.