ದೆಹಲಿ,ಜ 03 (DaijiworldNews/PC): ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಬುಧವಾರ ಪ್ರಮುಖ ಆರೋಪಿಯನ್ನು ಬಂಧಿಸಿದೆ.
ಬಂಧಿತ ಆರೋಪಿ ಅಶೋಕ್ ಕುಮಾರ್ ಗ್ಯಾಂಗ್ಸ್ಟರ್ ರೋಹಿತ್ ಗೋಡಾರಾ ಜತೆ ನಿಕಟ ಸಂಪರ್ಕ ಹೊಂದಿದ್ದು, ಗೊಗಮೆಡಿ ಹತ್ಯೆಯ ಹೊಣೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ವಹಿಸಿಕೊಂಡಿದ್ದ ಎನ್ನಲಾಗುತ್ತಿದೆ.
ಎನ್ಐಎ ತಂಡವು ದಾಳಿಯನ್ನು ನಡೆಸಿದ್ದು ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.
ಅಶೋಕ್ ಕುಮಾರ್ ಬಂಧನದೊಂದಿಗೆ, ಕೊಲೆಯಲ್ಲಿ ಬಂಧಿತರ ಒಟ್ಟು ಸಂಖ್ಯೆ 9 ಆಗಿದೆ.2023 ರ ಡಿಸೆಂಬರ್ 5 ರಂದು ಜೈಪುರದ ಕರ್ಣಿ ಸೇನಾ ಮುಖ್ಯಸ್ಥರ ಶ್ಯಾಮ್ ನಗರ ನಿವಾಸದಲ್ಲಿ ನಡೆದ ಶೂಟೌಟ್ನಲ್ಲಿ ಗೊಗಮೆಡಿ ಮತ್ತು ಮತ್ತೊಬ್ಬ ವ್ಯಕ್ತಿ ನವೀನ್ ಶೇಖಾವತ್ ಹತ್ಯೆಯಾಗಿತ್ತು.
ಬಂಧಿತ ಆರೋಪಿಗಳು ಮತ್ತು ಶಂಕಿತರ ನಿರಂತರ ವಿಚಾರಣೆಯು ಹತ್ಯೆಯಲ್ಲಿ ಹರ್ಯಾಣ ಮತ್ತು ರಾಜಸ್ಥಾನ ಮೂಲದ ಹಾರ್ಡ್ಕೋರ್ ಕ್ರಿಮಿನಲ್ಗಳು ಮತ್ತು ಸಂಘಟಿತ ಕ್ರಿಮಿನಲ್ ಗ್ಯಾಂಗ್ಗಳ ಸದಸ್ಯರ ಕೈವಾಡವನ್ನು ಬಹಿರಂಗಪಡಿಸಿದೆ ಎಂದು ಫೆಡರಲ್ ಏಜೆನ್ಸಿ ಹೇಳಿದೆ.