ನವದೆಹಲಿ, ಜ 4(DaijiworldNews/Sk): ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಏರ್ಲೈನ್ ಇಂಡಿಗೋ ಪ್ರಯಾಣಿಕರಿಂದ ಸಂಗ್ರಹಿಸುತ್ತಿದ್ದ ಇಂಧನ ಶುಲ್ಕವನ್ನು ಇನ್ನು ಮುಂದೆ ಸಂಗ್ರಹಿಸುವುದಿಲ್ಲ ಇಂದು ಘೋಷಣೆ ಮಾಡಿದೆ.
ಈ ಮೊದಲು ಭಾರತದ ಬಜೆಟ್ ಏರ್ಲೈನ್ ಎನಿಸಿರುವ ಇಂಡಿಗೋ ಏರ್ಲೈನ್ ವೈಮಾನಿಕ ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ 2023ರ ಅ.6ರಿಂದ ದೇಶೀಯ ಮತ್ತು ವಿದೇಶಿ ಟಿಕೆಟ್ ದರದ ಮೇಲೆ 300 ರೂ.ಗಳಿಂದ 1,000ರೂ.ವರೆಗೆ ಇಂಧನ ದರವನ್ನೂ ಸಂಸ್ಥೆ ವಿಧಿಸುತಿತ್ತು.
ಆದರೆ ಇದೀಗ ವೈಮಾನಿಕ ಇಂಧನ ಬೆಲೆ ತಗ್ಗಿರುವ ಹಿನ್ನೆಲೆಯಲ್ಲಿ ಜ.4ರಿಂದ ಅನ್ವಯವಾಗುವಂತೆ ವಿಮಾನ ಟಿಕೆಟ್ ದರದಲ್ಲಿ 1,000 ರೂ. ವರೆಗೆ ಕಡಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.