ಜ 5 (DaijiworldNews/SK): ಟೆಕ್ ದೈತ್ಯ ಸಂಸ್ಥೆಗಳ ನಡುವಿನ ಹೊಸ ಪೀಳಿಗೆಯ ಕೃತಕ ಬುದ್ಧಿಮತ್ತೆ (AI)ಯ ನಡುವೆ ತೀವ್ರ ಸ್ಪರ್ಧೆಯೇ ನಡೆಯುತ್ತಿದೆ. ಮೈಕ್ರೋಸಾಫ್ಟ್-ಬೆಂಬಲಿತ ಚಾಟ್ಜಿಪಿಟಿ ಗ್ರಾಹಕ ಆಧಾರಿತ ಎಐ ಟೂಲ್ ವಿಭಾಗದಲ್ಲಿ ಆರಂಭಿದಲ್ಲಿ ಮುನ್ನಡೆ ಶಾದಿಸುತ್ತಿದ್ದಂತೆಯೇ, ಗೂಗಲ್ ಬಾರ್ಡ್ ಎಐ ಇದಕ್ಕೆ ಪ್ರತಿಯಾಗಿ ಹೊರತಂದು, ಓಪನ್ ಎಐಗೆ ಕಠಿಣ ಉತ್ತರ ನೀಡಿತು. ಹೀಗಾಗಿ ಇದರ ಹಿಂದಿದ್ದ ಐಐಟಿ ಪದವೀಧರ ಎಐ ಪ್ರತಿಭೆ ಪ್ರಭಾಕರ್ ರಾಘವನ್ ಬಗ್ಗೆ ಹೇಳಲೇಬೇಕು
ಪ್ರಸ್ತುತ ಗೂಗಲ್ನಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಭಾಕರ್ ರಾಘವನ್ ಅವರು ಭೋಪಾಲ್ನಲ್ಲಿ ಹುಟ್ಟಿ ಬೆಳೆದವರು. ತಮ್ಮ ಪ್ರಾಥಮಿಕ ಮತ್ತು ಮಧ್ಯಮ ಶಿಕ್ಷಣವನ್ನು ಕ್ಯಾಂಪಿಯನ್ ಶಾಲೆಯಲ್ಲಿ ಮಾಡಿದರು. ನಂತರ ಐಐಟಿ ಮದ್ರಾಸ್ನಿಂದ ತಮ್ಮ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿ ಮತ್ತು ಪಿಎಚ್ಡಿ ಪಡೆದ ಬಳಿಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಮತ್ತು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡಿದರು.
ಪ್ರಭಾಕರ್ ಅವರು ೨೦೨೨ ರಲ್ಲಿ ಗೂಗಲ್ ಕಂಪನಿಯನ್ನು ಸೇರುತ್ತಾರೆ. ಅದಕ್ಕೂ ಮುನ್ನ ಅವರು ಯಾಹೂ ಕಂಪನಿಯಲ್ಲಿ ಲ್ಯಾಬ್ಗಳು, ಹಾಗೆಯೇ ಜಾಹೀರಾತು ಮಾರುಕಟ್ಟೆ ವಿನ್ಯಾಸ, ಮತ್ತು ನಂತರ ಕಂಪನಿಯ ಮುಖ್ಯ ಕಾರ್ಯತಂತ್ರ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಇಷ್ಟು ಮಾತ್ರವಲ್ಲದೇ ವೆರಿಟಿಯಲ್ಲಿ CTO ಆಗಿ ಸೇವೆ ಸಲ್ಲಿಸಿದರು ಮತ್ತು IBM ನಲ್ಲಿ ಸೇವೆ ಸಲ್ಲಿಸುವ ಮೂಲಕ ಒಟ್ಟಾರೆಯಾಗಿ ೧೪ ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿದರು.
ನಂತರ ಗೂಗಲ್ ಕಂಪನೆಯಲ್ಲಿ ಸ್ಥಾನ ಪಡೆದ ಪ್ರಭಾಕರ್, ತಮ್ಮ ಸೃಜನಾತ್ಮಕ ಕೌಶಲ್ಯದ ಮೂಲಕ Google Apps, Google Cloud ನ ಉಪಾಧ್ಯಕ್ಷರಾಗಿ, ಇಂಜಿನಿಯರಿಂಗ್, ಉತ್ಪನ್ನಗಳು ಮತ್ತು ಬಳಕೆದಾರರ ಅನುಭವವನ್ನು ನೋಡಿಕೊಳ್ಳುತ್ತಿದ್ದರು. ಬಳಿಕ ಅವರ ನಾಯಕತ್ವದಲ್ಲಿ ಅಪ್ಲಿಕೇಶನ್ಗಳ ವ್ಯವಹಾರವು ಗ್ರಾಹಕ ಅಪ್ಲಿಕೇಶನ್ಗಳ ಗುಂಪಿನಿಂದ ಉದ್ಯಮ ಪರಿಹಾರಕ್ಕೆ ವಿಸ್ತರಿಸಿತು, ಅದು Google ನ ಕ್ಲೌಡ್ ವ್ಯವಹಾರಕ್ಕೆ ಪ್ರಮುಖ ಕೊಡುಗೆಯಾಗಿದೆ. ಇದರೊಂದಿಗೆ ಅವರು 1 ಶತಕೋಟಿ MAU ಗಳ ಹಿಂದೆ Gmail ಮತ್ತು ಡ್ರೈವ್ ಎರಡನ್ನೂ ಬೆಳೆಸಿದರು ಮತ್ತು ಸ್ಮಾರ್ಟ್ ಪ್ರತ್ಯುತ್ತರ, ಸ್ಮಾರ್ಟ್ ಸಂಯೋಜನೆ, ಡ್ರೈವ್ ತ್ವರಿತ ಪ್ರವೇಶ ಸೇರಿದಂತೆ G Suite ನಲ್ಲಿ ಹಲವಾರು ಯಂತ್ರ ಬುದ್ಧಿಮತ್ತೆ ವೈಶಿಷ್ಟ್ಯಗಳನ್ನು ಪರಿಚಯಿಸಿದರು.
ಇನ್ನು ಪ್ರಭಾಕರ್ ಅವರು ಐಐಟಿ ಪದವೀಧರರು ಜಗತ್ತಿನ ಅತಿ ದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಸ್ಥಾನ ಪಡೆದು ವರ್ಷಕ್ಕೆ 300 ಕೋಟಿ ಪ್ಯಾಕೇಜ್ ಅನ್ನು ಪಡೆಯುತ್ತಿದ್ದರು. ಈ ಮೂಲಕ ಸಮಾಜದಲ್ಲಿ ಅದೆಷ್ಟು ಮಂದಿ ತಂತ್ರಜ್ಞಾನದ ಬಗ್ಗೆ ನುರಿತ ಜ್ಞಾನವಿದ್ದರೂ ಅದನ್ನು ಕೆಲವೊಬ್ಬರು ತಮ್ಮ ದುರುಪಯೋಗಕ್ಕೆ ಬಳಸಿಕೊಂಡು ಕೆಟ್ಟ ಹಾದಿಯನ್ನು ತುಳಿಯುತ್ತಾರೆ. ಆದರೆ ಪ್ರಭಾಕರ್ ಅವರ ಈ ಸಾಧನೆಯು ನಮ್ಮಲ್ಲಿರುವ ಪ್ರತಿಭೆಯನ್ನು ಸರಿಯಾದ ಸಮಯದಲ್ಲಿ ಕಾರ್ಯರೂಪಕ್ಕೆ ತಂದು ಸದುಪಯೋಗಪಡಿಸಿದರೆ ನಮ್ಮ ಜೀವನದಲ್ಲೂ ಯಶಸ್ಸನ್ನು ಕಾಣುವುದರ ಜೊತೆಗೆ ದೇಶದ ಅಭಿವೃದ್ಧಿಯನ್ನು ಉತ್ತುಂಗಕ್ಕೆ ಕೊಂಡೊಯ್ಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.