ಹುಬ್ಬಳ್ಳಿ, ಜ 05 (DaijiworldNews/HR): ಬಿಜೆಪಿ ಧಾರ್ಮಿಕ ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿದೆ ಎಂದು ಮಾಜಿ ಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ಕರಸೇವಕನ ಬಂಧನ ವಿಷಯವನ್ನು ಬಿಜೆಪಿ ರಾಜಕೀಯಕ್ಕೆ ಬಳಕೆ ಮಾಡುತ್ತಿದ್ದು, ಇದರ ಹಿಂದೆ ಕೇಂದ್ರ ಸಚಿವ ಪ್ರಹ್ಲಾದದ ಜೋಶಿ ಕೈವಾಡವಿದೆ ಎಂದರು.
ಇನ್ನು ನಾನು ಈ ಹಿಂದೆ ಮುಖ್ಯಮಂತ್ರಿ, ಸಚಿವನಾಗಿದ್ದಾಗ ಹಿಂದೂ, ಕರಸೇವಕರ ಮೇಲಿನ ಹೋರಾಟದ ಪ್ರಕರಣಗಳನ್ನು ವಜಾಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ.