ಕೊಲೊಂಬೋ,ಏ21(Daijiworld News/AZM):ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಿಂದ ಬಹುಭಾಷಾ ನಟಿ ರಾಧಿಕಾ ಶರತ್ ಕುಮಾರ್ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ರಾಧಿಕಾ ಅವರೇ ಟ್ವೀಟ್ ಮಾಡಿದ್ದಾರೆ.
ರಾಧಿಕಾ ಅವರು ಬಾಂಬ್ ಸ್ಫೋಟವಾದ ಹೋಟೆಲ್ಗಳಲ್ಲಿ ಒಂದಾದ ಸಿನ್ನಾಮೋನ್ ಗ್ರ್ಯಾಂಡ್ನಲ್ಲಿ ಉಳಿದುಕೊಂಡಿದ್ದು,ಅವರು ಆ ಹೋಟೆಲ್ನಿಂದ ಹೊರಟ ನಂತರ ಅಲ್ಲಿ ಬಾಂಬ್ ಸ್ಫೋಟವಾಗಿದೆ ಎಂದು ಅವರು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
'ಘಟನೆ ನಡೆದ ವಿಷಯ ನನಗೆ ನ್ಯೂಸ್ನಿಂದ ತಿಳಿದಿದ್ದು, ಅವರಿಗೆ ಇದರಿಂದ ಆಘಾತವಾಗಿದೆ. ಇದು ವಿಷಾಧನೀಯ ಘಟನೆ. ನೊಂದವರ ಕುಟುಂಬದವರಿಗೆ ದೇವರು ಶಕ್ತಿ ಕೊಡಲಿ' ಎಂದು ರಾಧಿಕಾ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ರಾಧಿಕಾ ಅವರು ಶ್ರೀಲಂಕಾಗೆ ಹೋದಾಗಲೆಲ್ಲ ಬಾಂಬ್ ಸ್ಫೋಟ ನಡೆದಿರುವ ಚರ್ಚ್ಗೆ ಹೋಗುತ್ತಿದ್ದು,ಬಾಂಬ್ ಸ್ಫೋಟ ನಡೆಯುವ ಕೆಲವೇ ಗಂಟೆಗಳ ಮೊದಲು ಅವರು ಆ ಹೋಟೆಲ್ನಿಂದ ಹೊರಟಿದ್ದರು ಎನ್ನಲಾಗಿದೆ.
ಶ್ರೀಲಂಕಾದ ಕೊಲೊಂಬೋದಲ್ಲಿ ಬೆಳಿಗ್ಗೆ 7ರಿಂದ ಮಧ್ಯಾಹ್ನದವರೆಗೆ 8 ಬಾರಿ ಬಾಂಬ್ ಸ್ಫೋಟವಾಗಿದ್ದು, 185 ಮಂದಿ ಸಾವನ್ನಪ್ಪಿದ್ದು, 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.