ಬೆಂಗಳೂರು, ಜ 06 (DaijiworldNews/PC): ಕೇರಳ ಮಾದರಿಯ ಹೊಸ ಚಿಟ್ಫಂಡ್ ಕರ್ನಾಟಕ ಸರ್ಕಾರ ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಮಹಿಳೆಯರಿಗೆ ಗೃಹಲಕ್ಷ್ಮಿ ಗ್ಯಾರಂಟಿ ಗಿಫ್ಟ್ ಕೊಟ್ಟ ಸರ್ಕಾರ ಅದೇ ದುಡ್ಡನ್ನು ಮಹಿಳೆಯರು ಚಿಟ್ಫಂಡ್ನಲ್ಲಿ ಹೂಡಿಕೆ ಮಾಡುವ ಹೊಸ ಸ್ಕೀಮ್ನ್ನು ತರಲು ರೆಡಿ ಮಾಡಿದೆ.
ಎಂಎಸ್ಐಎಲ್ನಿಂದ ಏಪ್ರಿಲ್ನಲ್ಲಿ ಈ ನಯಾ ಸ್ವರೂಪದ ಚಿಟ್ಫಂಡ್ ರಾಜ್ಯದ್ಯಾಂತ ಜಾರಿಯಾಗಲಿದ್ದು ಪ್ರಮುಖವಾಗಿ ಮಹಿಳೆಯರನ್ನು ಈ ಚಿಟ್ಫಂಡ್ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
ಚಿಟ್ ಫಂಡ್ ಎಂದರೆ ಭಾರತದಲ್ಲಿ ಬಳಕೆಯಲ್ಲಿರುವ ಒಂದು ಬಗೆಯ ಆವರ್ತಕ ಉಳಿತಾಯ ಹಾಗೂ ಸಾಲದ ಖಾತೆ ಸಂಘದ ವ್ಯವಸ್ಥೆಯಾಗಿದೆ.
ಗೃಹಲಕ್ಷ್ಮಿಯ ಯೋಜನೆಯಿಂದ ಮಹಿಳೆಯರಿಗೆ ಹಣ ಬರುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಚಿಟ್ಫಂಡ್ ಉನ್ನತೀಕರಣಕ್ಕೆ ಉಪಯೋಗವಾಗಲಿದೆ.