ಬೆಂಗಳೂರು, ಜ 06 (DaijiworldNews/AA): ರಾಜ್ಯದಲ್ಲಿ ಇಂದು 297 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 1,136 ತಲುಪಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇಂದು ದೃಢಪಟ್ಟ 297 ಕೊರೊನಾ ಪ್ರಕರಣಗಳ ಪೈಕಿ 171 ಪ್ರಕರಣಗಳು ಬೆಂಗಳೂರಿನಲ್ಲಿಯೇ ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ದರ ಶೇಕಡಾ 4.3 ರಷ್ಟಿದೆ ಎಂದು ತಿಳಿದುಬಂದಿದೆ.
ಇನ್ನು ಬೆಂಗಳೂರನ್ನು ಹೊರತು ಪಡಿಸಿ ಬಾಗಲಕೋಟೆ 5, ಬಳ್ಳಾರಿ 6, ಬೆಂಗಳೂರು ಗ್ರಾಮಾಂತರ 12, ಚಾಮರಾಜನಗರ 2, ಚಿಕ್ಕಬಳ್ಳಾಪುರ 5, ಚಿತ್ರದುರ್ಗ 5, ದಕ್ಷಿಣ ಕನ್ನಡ 6, ದಾವಣಗೆರೆ 1, ಧಾರವಾಡ 8, ಗದಗ 2, ಹಾವೇರಿ 4, ಕಲಬುರಗಿ 5, ಕೊಡಗು 1, ಕೋಲಾರ 3, ಕೊಪ್ಪಳ 8, ಮಂಡ್ಯ 6, ಮೈಸೂರು 26, ರಾಯಚೂರು 2, ರಾಮನಗರ 6, ಶಿವಮೊಗ್ಗ 4, ತುಮಕೂರು 4, ವಿಜಯನಗರ 4, ವಿಜಯಪುರದಲ್ಲಿ 1 ಪ್ರಕರಣಗಳು ದೃಢಪಟ್ಟಿರುವುದಾಗಿ ಇಲಾಖೆ ತಿಳಿಸಿದೆ.