ನವದೆಹಲಿ, ಜ 08 (DaijiworldNews/MS): ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಲೇವಡಿಯಿಂದ, ಪ್ರವಾಸೋದ್ಯಮವನ್ನೇ ನಂಬಿರುವ ಮಾಲ್ಡೀವ್ಸ್ಗೆ ಭಾರೀ ಹೊಡೆತ ಬಿದ್ದಿದೆ.ಈಗಾಗಲೇ ಹಲವು ಮಂದಿ ಮಾಲ್ಡೀವ್ಸ್ಗೆ ಪ್ರವಾಸಕ್ಕೆಂದು ವಿಮಾನ, ಹೋಟೆಲ್ಗಳನ್ನು ಬುಕ್ ಮಾಡಿದವರು ರದ್ದುಗೊಳಿಸಿದ್ದಾರೆ, ಇದರೊಂದಿಗೆ ಈ ವಿವಾದಗಳ ಬೆನ್ನಲ್ಲೇ ಹೆಸರಾಂತ ಟ್ರಾವೆಲ್ ಏಜೆನ್ಸಿ ‘ಈಸ್ ಮೈ ಟ್ರಿಪ್’ ಮಾಲ್ಡೀವ್ಸ್ನತ್ತ ಸಾಗಬೇಕಿದ್ದ ತನ್ನೆಲ್ಲಾ ವಿಮಾನದ ಬುಕಿಂಗ್ಸ್ಗಳನ್ನು ಸ್ಥಗಿತಗೊಳಿಸಿದೆ.
ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ಸಚಿವರು ನೀಡಿರುವ ಹೇಳಿಕೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ #BoycottMaldives ಎಂಬುದು ಹೆಚ್ಚು ಟ್ರೆಂಡ್ ಆಗಿತ್ತು.
ಕಳೆದ 48 ಗಂಟೆಗಳಲ್ಲಿ ಅನೇಕ ಭಾರತೀಯರು ಮಾಲ್ಡೀವ್ಸ್ಗೆ ತೆರಳಲು ಮಾಡಿದ್ದ ಬುಕಿಂಗ್ ಅನ್ನು ರದ್ದುಗೊಳಿಸಿದ್ದು, ನಮ್ಮ ದೇಶವನ್ನು ದ್ವೇಷಿಸುವ ದೇಶಕ್ಕೆ ಹೋಗಲು ಭಾರೀ ಹಣವನ್ನು ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ ಎಂದು ಎಕ್ಸ್ನಲ್ಲಿಪೋಸ್ಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಇದೀಗ ಈಸಿಮೈಟ್ರಿಪ್(EaseMyTrip) ಸಹ ಸಂಸ್ಥಾಪಕ ನಿಶಾಂತ್ ಪಿಟ್ಟಿ ಅವರು ಮಾಲ್ಡೀವ್ಸ್ಗೆ ತೆರಳಬೇಕಿದ್ದ ಎಲ್ಲಾ ವಿಮಾನಗಳ ಬುಕಿಂಗ್ಗಳನ್ನು ದಿಢೀರ್ ಸ್ಥಗಿತಗೊಳಿಸಿದ್ದಾರೆ.