ಬೆಂಗಳೂರು, ಜ 8(DaijiworldNews/AA): ಕೆಆರ್ ಎಸ್ ಡ್ಯಾಂನ ಸುತ್ತಮುತ್ತ 20ಕೀ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿರ್ಬಂಧ ಹೇರಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ, ಕೆಆರ್ ಎಸ್ ಡ್ಯಾ ಈಗಾಗಲೇ ಸಂಕಷ್ಟದಲ್ಲಿದ್ದು, ಡ್ಯಾಂ ನ ಸಮೀಪ ಭಾರೀ ದೊಡ್ಡ ಶಬ್ದಗಳು ಕೇಳಿ ಬಂದಿದೆ. ಡ್ಯಾಂ ನ ಬಳಿ ಗಣಿಗಾರಿಕೆ ನಡೆಸಿದಲ್ಲಿ ಅಪಾಯ ಉಂಟಾಗುವ ಸಂಭವವಿದೆ ಎಂದು ಹೇಳಿದೆ.
ತೀ.ತಾ. ಶರ್ಮರ ಸರ್.ಎಂ. ವಿಶ್ವೇಶ್ವರಯ್ಯ ಕುರಿತ ಪುಸ್ತಕದಲ್ಲಿ ಉಲ್ಲೇಖವಾಗಿರುವಂತೆ ಕೆಆರ್ ಎಸ್ ಡ್ಯಾಂ ನಿರ್ಮಾಣಕ್ಕಾಗಿ ಜನರು ರಕ್ತ, ಬೆವರು ಹರಿಸಿದ್ದಾರೆ. ಕೆಆರ್ ಎಸ್ ಗೆ ಧಕ್ಕೆಯಾಗುವಂತಹ ಯಾವುದೇ ಚಟುವಟಿಕೆಗೆ ಅವಕಾಶವಿರುವುದಿಲ್ಲ. 3 ರಾಜ್ಯಗಳು ಕಾವೇರಿ ನೀರಿಗಾಗಿ ಹೋರಾಡುತ್ತಿದೆ. ಆದರೆ ಡ್ಯಾಂನಲ್ಲಿ ನೀರಿನ ಸಂರಕ್ಷಣೆ ಮಾಡುವ ಪ್ರಯತ್ನವಾಗುತ್ತಿಲ್ಲ. ಡ್ಯಾಂಗೆ ಆಗುವ ಅನಾಹುತಗಳ ಬಗ್ಗೆ ಅರಿವಿದೆಯೇ? ಡ್ಯಾಂಗೆ ಹಾನಿ ಉಂಟಾದರೆ ಇಡೀ ರಾಜ್ಯಕ್ಕೆ ಆಪತ್ತು ಎಂದು ನ್ಯಾಯಪೀಠ ತಿಳಿಸಿದೆ.