ಬೆಂಗಳೂರು,ಜ 08 (DaijiworldNews/ AK): ಡಿಸಿಎಂ ಡಿಕೆ ಶಿವಕುಮಾರ್ ಅಕ್ಕಿಯನ್ನು ದೊಡ್ಡ ಆಲದಹಳ್ಳಿಯಲ್ಲಿ ಬೆಳೆದಿರೋದಾ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಅನ್ನಭಾಗ್ಯ ಅಕ್ಕಿಯಲ್ಲಿ ಬಿಜೆಪಿ ಅವರು ಮಂತ್ರಾಕ್ಷತೆ ಕೊಡುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಬಿಜೆಪಿ ನಮಗೆ ಆಹ್ವಾನ ನೀಡಿಲ್ಲ. ರಾಮನ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಹೆಚ್ ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜೆಪಿ ಭವನದಲ್ಲಿ ಮಾತನಾಡಿದ ಅವರು, ಇವರು ಅಕ್ಕಿ ದೊಡ್ಡ ಆಲದ ಹಳ್ಳಿಯಲ್ಲಿ ಬೆಳೆದಿದ್ದಾರಾ? ದೊಡ್ಡ ಆಲದ ಹಳ್ಳಿಯಲ್ಲಿ ಬೆಳೆದು ಕಳುಹಿಸಿರುವ ಅಕ್ಕಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮ ಮಂದಿರಕ್ಕೆ ನಮಗೆ ಆಹ್ವಾನ ನೀಡಿಲ್ಲ ಎಂದ ಡಿಕೆಶಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಅವರನ್ನು ಕರೆಯಬೇಕೇ? ಪ್ರಧಾನಿಗಳು ಈಗಾಗಲೇ ಉದ್ಘಾಟನೆಯಾದ ಬಳಿಕ ಜನರ ದರ್ಶನಕ್ಕೆ ಅವಕಾಶ ನೀಡಿದ ಬಳಿಕ ಯಾರು ಬೇಕಾದರೂ ಬರಬಹುದು ಎಂದು ಹೇಳಿದ್ದಾರೆ. ಅದಕ್ಕೆ ಅನುಮತಿ ಬೇಕೇ ಎಂದು ವಾಗ್ದಾಳಿ ನಡೆಸಿದರು.
ರಾಮನ ಬಗ್ಗೆ ಭಕ್ತಿ ಇರುವವರು ದೇವರ ಬಗ್ಗೆ ನಂಬಿಕೆ ಇರುವವರು ಹೋಗಬಹುದು. ಡಿಕೆಶಿವಕುಮಾರ್ ಮನೆಯಲ್ಲಿ ಬರೀ ದೇವರ ಪೋಟೋಗಳು ಇವೆ. ದೇವರ ರಕ್ಷಣೆ ಇಲ್ಲದೆ ಹೋದರೆ ಅವರು ಉಳಿಯಬೇಕಲ್ಲವಾ? ಅದಕ್ಕೆ ಫೋಟೋಗಳನ್ನು ಹಾಕಿದ್ದಾರೆ. ಅದಕ್ಕೆ ಪಾಪ ಯಾವಾಗಲು ದೇವರು ನೆನಸಿಕೊಳ್ಳುತ್ತಾರೆ ಎಂದು ತಿರುಗೇಟು ನೀಡಿದರು.