ಧಾರವಾಡ, ಜ 09(DaijiworldNews/PC): ಕೇವಲ ಕನಸನ್ನು ಕಂಡರೆ ಸಾಲದು ಆ ಕನಸನ್ನು ನಾವು ನನಸು ಮಾಡುವವರೆಗೂ ಛಲ ಹಾಗೂ ನಿರಂತರ ಪರಿಶ್ರಮ ದಿಂದ ಮಾತ್ರವೇ ಆ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಇಂತಹದೇ ಕನಸನ್ನು ಕಂಡು ಕಠಿಣ ಪರಿಶ್ರಮದಿಂದ ನನಸು ಮಾಡಿಕೊಂಡಿರುವ ಸಾಧಕ ವಿರಾಜ್ ಎಸ್ ಹೊಸೂರು ಅವರ ಯಶೋಗಾಥೆ ಇದು.
ಬಾಲ್ಯದಲ್ಲಿ ಪ್ರಕೃತಿ ಮತ್ತು ಪ್ರಾಣಿಗಳ ಮೇಲಿನ ಒಲವು ಹೊಂದಿದ್ದ ವಿರಾಜ್ ಎಸ್ ಹೊಸೂರು ಅವರು ಅರಣ್ಯ ಸಂರಕ್ಷಣೆಗೆ ಕೊಡುಗೆ ನೀಡಲು ಡಿಎಫ್ ಒ ಆಗುವ ಕನಸನ್ನು ಹೊಂದಿದ್ದರು. ಬಾಲ್ಯದಲ್ಲಿ ತನ್ನ ತಂದೆಯೊಂದಿಗೆ ಮೃಗಾಲಯ ಹಾಗೂ ಕಾಡಿಗೆ ಹೋದ ವಿರಾಜ್ ಅರಣ್ಯಗಳ ಮೇಲೆ ಮಾನವ ಅಸ್ತಿತ್ವವು ಹೇಗೆ ಅವಲಂಬಿತವಾಗಿದೆ ಎಂಬುದನ್ನು ಅರ್ಥಮಾಡಿಕೊಂಡರು. ಈ ಪರಿಸರ ವ್ಯವಸ್ಥೆಗಳಲ್ಲಿ ನಡೆಯುತ್ತಿರುವ ವಿನಾಶವನ್ನು ಕೂಡಾ ಗಮನಿಸಿದರು.
ಕರ್ನಾಟಕದ ಧಾರವಾಡ ಮೂಲದ ವಿರಾಜ್ ಬೆಂಗಳೂರಿನ ಆರ್ ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದರು.
ವಿರಾಜ್ ಅವರು ತನ್ನ B.Tech ಮುಗಿಸಿದ ನಂತರ, 2014 ರಲ್ಲಿ IFS ಪರೀಕ್ಷೆಯ ಕೋಚಿಂಗ್ ಗಾಗಿ ದೆಹಲಿಗೆ ತೆರಳಿದರು. ಹೆಚ್ಚಿನ IAS ಅಭ್ಯರ್ಥಿಗಳಲ್ಲಿ ಅರಣ್ಯ ಸೇವೆಯನ್ನು ಆರಿಸಿಕೊಂಡು, ವಿರಾಜ್ ಯಶಸ್ಸಿನ ಹಾದಿಯಲ್ಲಿ ಸವಾಲುಗಳನ್ನು ಎದುರಿಸಿದರು.
2015 ರಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ವಿರಾಜ್ UPSC ಪ್ರಿಲಿಮ್ಸ್ ನಲ್ಲಿ ಉತ್ತೀರ್ಣರಾಗಿ ಮುಖ್ಯ ಪರೀಕ್ಷೆಯನ್ನು ತೆಗೆದುಕೊಂಡರು. ತನ್ನ ಎರಡನೇ ಮತ್ತು ಮೂರನೇ ಪ್ರಯತ್ನಗಳಲ್ಲಿ ಹಿನ್ನಡೆಯನ್ನು ಎದುರಿದಿದರು. ಆದರೂ ಅವರು ತಮ್ಮ ಛಲವನ್ನು ಬಿಡದೇ ಮೂರನೇ ಪ್ರಯತ್ನದಲ್ಲಿ ಕಾರ್ಯಪಡೆಗೆ ಸೇರುವುದರ ಜೊತೆಗೆ IFS ಅವರ ನಿಜವಾದ ಕರೆ ಎಂದು ಶೀಘ್ರದಲ್ಲೇ ಅರಿತುಕೊಂಡರು.
2019 ರಲ್ಲಿ ವಿರಾಜ್ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ, ಪ್ರಿಲಿಮ್ಸ್ ನಲ್ಲಿ ಉತ್ತೀರ್ಣರಾದರು. ಆದರೆ IFS ಗೆ ಕಟ್-ಆಫ್ ಅನ್ನು ಪಡೆದುಕೊಳ್ಳುವಲ್ಲಿ ವಿಫಲರಾದರು. 2020 ರಲ್ಲಿ ಈ ಪ್ರವೃತ್ತಿ ಮುಂದುವರೆಯಿತು. ಮತ್ತೊಂದು ವಿರಾಮವನ್ನು ತೆಗೆದುಕೊಂಡ ಅವರು ಶಿಕ್ಷಣ ತಂತ್ರಜ್ಞಾನ ಕಂಪನಿಯಲ್ಲಿ ಉದ್ಯೋಗ ಪಡೆಡರು. ಬಳಿಕ ಅವರು ವಿವಾಹವಾದರು. ವಿರಾಜ್ ಅವರಿಗೆ ಮತ್ತೆ UPSC ಪರೀಕ್ಷೆ ಬರೆಯಲು ಅವರ ಪತ್ನಿ ಸ್ಫೂರ್ತಿ ನೀಡುತ್ತಾರೆ.
UPSC ಯಲ್ಲಿ ಪರ್ಯಾಯ ಕ್ಷೇತ್ರಗಳನ್ನು ಪರಿಗಣಿಸದೆ ಕೇವಲ IFS ನತ್ತ ಗಮನಹರಿಸಲು ನಿರ್ಧರಿಸಿದ ವಿರಾಜ್ ಅವರ ಅಚಲವಾದ ಸಮರ್ಪಣೆಗೆ ಫಲ ಸಿಕ್ಕಿತು, ಅವರು 9 ನೇ ಅಖಿಲ ಭಾರತ ರ್ಯಾಂಕ್ ಕೂಡ ಗಳಿಸುತ್ತಾರೆ. ಅವರಿಗೆ ಕರ್ನಾಟಕದ ಹೋಮ್ ಕೇಡರ್ ಅನ್ನು ನೀಡಲಾಗಿದ್ದು, ಅವರು ತರಬೇತಿ ಮುಗಿಸಿ ತಮ್ಮ ರಾಜ್ಯಕ್ಕೆ ಮರಳಲು ಉತ್ಸುಕರಾಗಿದ್ದಾರೆ. ವಿರಾಜ್ ಜನರಲ್ಲಿ ಅರಣ್ಯ ಸಂರಕ್ಷಣೆಯ ನಿರ್ಣಾಯಕ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದಾರೆ.