ಬೆಂಗಳೂರು, ಜ 09 (DaijiworldNews/HR): ಹೈ ಪ್ರೊಫೈಲ್ ಹಿನ್ನಲೆ ಹೊಂದಿರುವ ಸಿಇಒ ತನ್ನ ನಾಲ್ಕು ವರ್ಷದ ಮಗುವನ್ನು ಕೊಂದು ಚೀಲದಲ್ಲಿ ಹಾಕಿ ಗೋವಾದಿಂದ ಬೆಂಗಳೂರಿಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಸದ್ದು ಮಾಡಿತ್ತಿದ್ದು, ಇದೀಗ ಆಕೆ ಕೆಲವು ತಿಂಗಳುಗಳ ಹಿಂದೆ ತನ್ನ ಮಗನ ಪೋಟೊ ಇನ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವೈರಲ್ ಆಗುತ್ತಿದೆ.
ಅಕ್ವೇರಿಯಂ ಬಳಿ ತನ್ನ ನಾಲ್ಕು ವರ್ಷದ ಮಗ ಆಟವಾಡುತ್ತಿರುವುದನ್ನು ಕ್ಲಿಕ್ ಮಾಡಿರುವುದು ಸುಚನಾ ಸೇಠ್ ತನ್ನ ಇನ್ಸ್ಟಾಗ್ರಾಮ್ನಲ್ಲಿನ ಕೊನೆಯ ಪೋಸ್ಟ್ ಆಗಿದೆ.
ಇನ್ನು ವಿಚ್ಚೇದಿತ ಪತಿ ಮಗುವಿನ ಜತೆ ಮಾತನಾಡಬಾರದು ಎಂಬ ಕಾರಣಕ್ಕಾಗಿ ಸುಚನಾ ಮಗುವಿನ ಹತ್ಯೆಗೈದಿರುವುದಾಗಿ ತಿಳಿದು ಬಂದಿದೆ.
2010ರಲ್ಲಿ ವಿವಾಹವಾಗಿದ್ದ ದಂಪತಿಗೆ 2019ರಲ್ಲಿ ಗಂಡು ಮಗು ಜನಿಸಿತ್ತು. ಇಬ್ಬರ ನಡುವಿನ ವಿರಸದಿಂದಾಗಿ 2020ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ ಪ್ರತಿ ಭಾನುವಾರ ಮಗುವನ್ನು ಭೇಟಿಯಾಗಲು ತಂದೆಗೆ ಕೋರ್ಟ್ ಅನುಮತಿ ನೀಡಿತ್ತು.