ನವದೆಹಲಿ, ಎ22(Daijiworld News/SS): ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಏಪ್ರಿಲ್ 26ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಅವರನ್ನು ಬಾರಿ ಮತಗಳ ಅಂತರದಿಂದ ಪರಾಜಯಗೊಳಿಸಿದ್ದರು. ಈ ಬಾರಿಯೂ ಕೂಡಾ ವಾರಣಾಸಿಯಿಂದ ಕಣಕ್ಕಿಳಿಯಲಿರುವ ಮೋದಿ ಏಪ್ರಿಲ್ 25ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಸುವ ದಿನ ಮೋದಿ ರೋಡ್ ಶೋ ಕೂಡ ನಡೆಸಲಿದ್ದು, ಅದಕ್ಕೂ ಮೊದಲು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪಕ್ಷದ ಮುಖಂಡರಾದ ಜೆಪಿ ನಡ್ಡಾ, ಲಕ್ಷ್ಮಣ್ ಆಚಾರ್ಯ, ಸುನೀಲ್ ಓಝಾ ಹಾಗೂ ಅಶುತೋಷ್ ಟಂಡನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
ಬಿಜೆಪಿ ನಾಯಕರ ಜೊತೆ ಚರ್ಚೆಯ ಬಳಿಕ ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಯಲಿದೆ. ವಾರಣಾಸಿಯ ಬನರಾಸ್ ಹಿಂದೂ ಯೂನಿರ್ವಸಿಟಿಯ ಲಂಕಾ ಗೇಟ್ ಸಮೀಪದಿಂದ ರೋಡ್ ಶೋ ಆರಂಭವಾಗಲಿದೆ.