ಕಾರವಾರ, ಜ 16 (DaijiworldNews/HR): ಸಭ್ಯತೆ ಹಾಗೂ ಸಂಸ್ಕೃತಿ ವಿಷಯದಲ್ಲಿ ನನ್ನೊಂದಿಗೆ ಮುಖಾಮುಖಿ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಸವಾಲೆಸೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅನಂತ್ ಕುಮಾರ್ ಹೆಗಡೆ ಮಾಡಿರುವ ಪದಬಳಕೆಯ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದು, ಈ ಕುರಿತು ಉತ್ತರಿಸಿದ ಅವರು, ಮಾತಾನಾಡಿರುವ ಮಾತನ್ನು ತಮ್ಮ ಪಕ್ಷದ ನಾಯಕರು ಸಮರ್ಥಿಸದಿರುವುದು ಸ್ವಾಭಾವಿಕ, ಅದು ತನ್ನ ವೈಯಕ್ತಿಕ ಹೇಳಿಕೆ ಎಂದರು.
ಇನ್ನು ಸಭ್ಯತೆ ವಿಷಯದಲ್ಲಿ ಸಿದ್ದರಾಮಯ್ಯ ತನ್ನೊಂದಿಗೆ ಸಾರ್ವಜನಿಕ ಚರ್ಚೆಯಲ್ಲಿ ಭಾಗಿಯಾಬೇಕು ಮತ್ತು ಜನ ಅದನ್ನು ನೋಡಬೇಕು, ಸಭ್ಯತೆಯಿಂದ ಅವರು ಮಾತಾಡಿದ್ದು ಯಾವಾಗ?ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯವರ ಬಗ್ಗೆ ಮಾತಾಡುವಾಗ ಸಭ್ಯತೆ ಮತ್ತು ಸಂಸ್ಕೃತಿಯ ಎಲ್ಲೆ ಮೀರಿ ಮಾತಾಡಿದ್ದಾರೆ ಎಂದು ಹೇಳಿದ್ದಾರೆ.