ಬೆಂಗಳೂರು, ಜ 16 (DaijiworldNews/HR): ಬಿಬಿಎಂಪಿ ತೆರಿಗೆ ವಿಚಾರದಲ್ಲಿ ಕೆಲವು ಸಮಸ್ಯೆಗಳಿರುವ ನನ್ನ ಗಮನಕ್ಕೆ ಬಂದಿದ್ದು, ಕಾನೂನು ಪರಿಮಿತಿಯೊಳಗೆ ಸಾಧ್ಯವಾದಷ್ಟು ತೆರಿಗೆ ಕಡಿಮೆ ಮಾಡುತ್ತೇವೆ. ಎಲ್ಲವನ್ನೂ ಪುಕ್ಸಟೆ ಕೊಡುವುದಕ್ಕೆ ಅರ್ಥವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರ ವ್ಯಾಪ್ತಿಯ ಮಲ್ಲೇಶ್ವರ, ಚಾಮರಾಜಪೇಟೆ, ಗಾಂಧಿನಗರ ಜನರ ಸಮಸ್ಯೆ ಆಲಿಸಲು ಆಯೋಜಿಸಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾತ್ರಿ 10 ಗಂಟೆಯಾಗಲಿ, ನಿಮ್ಮ ಸಮಸ್ಯೆಗಳನ್ನು ಆಲಿಸಿಯೇ ನಿರ್ಗಮಿಸುತ್ತೇನೆ. ನಿಮ್ಮ ಸಮಸ್ಯೆಗಳನ್ನು ದಯವಿಟ್ಟು ನೋಂದಾಯಿಸಿಕೊಳ್ಳಿ ಎಂದರು.
ಇನ್ನು ಈಗಾಗಲೇ 13 ಕ್ಷೇತ್ರ ಪ್ರವಾಸ ಮಾಡಿದ್ದು, ಇವತ್ತು 3 ಕ್ಷೇತ್ರಗಳ ಸಮಸ್ಯೆ ಕೇಳಲು ಬಂದಿದ್ದೇನೆ. ದಯವಿಟ್ಟು ನಿಮ್ಮ ಸಮಸ್ಯೆಗಳನ್ನ ನೋಂದಣಿ ಮಾಡಿಸಿಕೊಳ್ಳಿ. ನಿಮಗೆ ಫೋನ್ ಮಾಡಲು ಪ್ರತ್ಯೇಕ ತಂಡ ರಚಿಸಿದ್ದೇನೆ. ಅವರು ನಿಮಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುತ್ತಾರೆ ಎಂದು ತಿಳಿಸಿದ್ದಾರೆ.