ತುಮಕೂರು, ಜ 17 (DaijiworldNews/MS): ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಸಹಕಾರ ಸಚಿವ ಕೆಎನ್ ರಾಜಣ್ಣ, ರಾಮಮಂದಿರದ ರಾಮಲಲ್ಲಾನನ್ನು "ಡೇರೆಯಲ್ಲಿ ಇರಿಸಲಾದ ಎರಡು ಗೊಂಬೆಗಳು" ಎಂದು ಹೋಲಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.
ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಸಮಾರಂಭದಲ್ಲಿ ಮಾತನಾಡಿದ ಅವರು, "ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿದ್ದ ನಂತರ ಅಲ್ಲಿಗೆ ಹೋಗಿದ್ದೆ. ಡೇರೆಯೊಂದರಲ್ಲಿ ಎರಡು ಗೊಂಬೆಗಳನ್ನಿಟ್ಟು ರಾಮ ರಾಮ ಎನ್ನುತ್ತಿದ್ದರು. ಬಿಜೆಪಿಯವರು ಜನರಿಗೆ ಮೋಸ ಮಾಡುತ್ತಿದ್ದಾರೆ ಡೇರೆಯಲ್ಲಿ ಎರಡು ಗೊಂಬೆಗಳನ್ನು ಇಟ್ಟು ಅದನ್ನು ಮತ್ತು ಅದನ್ನು ಭಗವಾನ್ ರಾಮ ಎಂದು ಕರೆಯುತ್ತಿದ್ದಾರೆ" ಎಂದು ಹೇಳಿದ್ದಾರೆ.
"ನಮ್ಮೂರಿನ ನೂರಾರು ವರ್ಷ ಇತಿಹಾಸವಿರುವ ಶ್ರೀರಾಮನ ದೇವಸ್ಥಾನಗಳಿವೆ. ಅಲ್ಲಿಗೆ ಹೋದಾಗ ಸಿಗುವ ಭಕ್ತಿಯ ಮತ್ತು ಧನಾತ್ಮಕ ಅನುಭೂತಿ ಅಲ್ಲಿರಲಿಲ್ಲ. ಅಯೋಧ್ಯೆಯ ರಾಮಲಲ್ಲಾನ ಬಗ್ಗೆ ನನಗೆ ಏನೂ ಅನಿಸಲೇ ಇಲ್ಲ ಎಂದು ಹೇಳಿದ್ದಾರೆ. ಇದು ಟೆಂಟ್ ನಲ್ಲಿಟ್ಟುವ ಗೊಂಬೆಗಳಂತಿತ್ತು. ಬಿಜೆಪಿ ಮಂದಿರದ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದೆ" ಎಂದು ಹೇಳಿದ್ದಾರೆ.
ಇನ್ನು ತಮ್ಮ ಹೇಳಿಕೆ ವಿವಾದ ಹುಟ್ಟು ಹಾಕುತ್ತಿದ್ದಂತೆಯೇ ಬಳಿಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ರಾಜಣ್ಣ, "ಟೆಂಟ್ ನಲ್ಲಿ ಗೊಂಬೆ ಇಟ್ಟಿದ್ದಕ್ಕೆ ನಿಮ್ಮೆಲ್ಲರಿಗೂ ಹಾಗೆ ಹೇಳಿದ್ದೆ, ಈಗ ಅಲ್ಲಿ ಏನಿದೆ ಎಂದು ನೋಡಿಲ್ಲ, ಒಮ್ಮೆ ಹೋಗಿ ನೋಡಿ ಹೇಳುತ್ತೇನೆ" ಎಂದಿದ್ದಾರೆ.