ಬೆಂಗಳೂರು, ಜ.18 (DaijiworldNews/RA): ಅನಂತ್ ಕುಮಾರ್ ಹೆಗಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಚಿಕಿತ್ಸೆ ಕೊಡಿಸಲಿ ಇಲ್ಲಾಂದ್ರೆ ನಾವು ಕೊಡಿಸ್ತೇವೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಕುರಿತಾಗಿ ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ ಹುಚ್ಚ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ ಎಂದು ಇವಾಗ ಸಾಬೀತಾಯಿತು.
ಬಿಜೆಪಿ ರಾಜ್ಯಾಧ್ಯಕ್ಷರೇ ಅನಂತ್ ಕುಮಾರ್ ಹೆಗಡೆ ಅವರ ಮಾತಿಗೆ ನಾವು ಬೆಲೆ ಕೊಡಲ್ಲ' ಎಂದು ಹೇಳಿದ್ದಾರೆ ಎಂದರು.
ಇನ್ನು ಅನಂತ್ ಕುಮಾರ್ ಹೆಗಡೆ ವಿರುದ್ಧದ ಕ್ರಮದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರ ಬಗ್ಗೆ ಕ್ರಮಕ್ಕೆ ಸಿಎಂ ಗೃಹ ಸಚಿವರು ನಿರ್ಧಾರ ಮಾಡ್ತಾರೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರು ಅವರಿಗೆ ಚಿಕಿತ್ಸೆ ಕೊಡಿಸಲಿ, ಇಲ್ಲಾಂದ್ರೆ ನಾವು ಕೊಡಿಸ್ತೇವೆ ಎಂದು ಹೇಳಿದ್ದಾರೆ.