ಬೆಂಗಳೂರು, ಜ 19 (DaijiworldNews/HR): ಗೋಧ್ರಾ ಮಾದರಿ ಹತ್ಯಾಕಾಂಡ ನಡೆಯಬಾರದು ಎಂಬ ಹೇಳಿಕೆ ಸಂಬಂಧ ಇಂದು ಪೊಲೀಸರು ನನ್ನ ವಿಚಾರಣೆ ಮಾಡಲು ಬಂದಿದ್ದರು. ನಾನು ಕೊಟ್ಟ ಹೇಳಿಕೆ ಅಪರಾಧ ಅನ್ನೋದಾದ್ರೆ ಪೊಲೀಸ್ ಸ್ಟೇಶನ್ಗೆ ಕರೆದು ಅರೆಸ್ಟ್ ಮಾಡಿ ವಿಚಾರಣೆ ಮಾಡಿ ಎಂದಿದ್ದೇನೆ. ನನಗೆ ವಿವಿಐಪಿ ಟ್ರೀಟ್ಮೆಂಟ್ ಬೇಕಾಗಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಪೊಲೀಸರು ಬಂದು ವಿಚಾರಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ, ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ರತ್ನಗಂಬಳಿ ಹಾಕಿದ್ದಾರೆ. ಠಾಣೆಗೆ ಬರಲು ವಾರೆಂಟ್ ತಗೊಂಡು ಬನ್ನಿ ಎಂದಿದ್ದೇನೆ ಎಂದರು.
ಇನ್ನು ಈಗ ಯಾವ ಹೇಳಿಕೆಯನ್ನೂ ಕೊಟ್ಟಿಲ್ಲ. ನಾನು ಅಪರಾಧಿ ಅಲ್ಲ. ಪೊಲೀಸರು ಟಾರ್ಗೆಟ್ ಮಾಡಿದ್ರೆ ನಾನು ಬಗ್ಗುವವನಲ್ಲ. ನಾನು ದೇಶದಲ್ಲಿ ಓಡಾಡಿದ್ದೇನೆ ಎಂದು ತಿಳಿಸಿದ್ದಾರೆ.