ನವದೆಹಲಿ, ಜ 19(DaijiworldNews/AA): 'ಮೋದಿ' ಉಪನಾಮದ ಹೇಳಿಕೆಗಾಗಿ ರಾಹುಲ್ ಗಾಂಧಿ ಸಂಸದೀಯ ಸದಸ್ಯತ್ವ ಅನರ್ಹತೆ ಆದೇಶ ರದ್ದು ಮಾಡಿ ಕ್ರಮವನ್ನು ಪ್ರಶ್ನಿಸಿ, ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಒಂದು ಲಕ್ಷ ರೂ. ದಂಡ ವಿಧಿಸಿದೆ.
ಪ್ರಧಾನಿ ನರೇಂದ್ರ ಮೋದಿ ಉಪನಾಮ ಪ್ರಕರಣಕ್ಕೆ ಪಿಐಎಲ್ ಯನ್ನು ಲಕ್ನೋ ಮೂಲದ ವಕೀಲರಾದ ಅಶೋಕ್ ಪಾಂಡೆ ಪಿಐಎಲ್ ಸಲ್ಲಿಸಿದ್ದರು. ಇದೀಗ ಸುಪ್ರೀಂ ಈ ಪಿಐಎಲ್ ವಜಾಗೊಳಿಸಿ, ಅಶೋಕ್ ಕುಮಾರ್ ಅವರಿಗೆ ದಂಡ ವಿಧಿಸುವುದರೊಂದಿಗೆ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಸುಪ್ರೀಂಕೊರ್ಟ್ ಪೀಠದ ನ್ಯಾಯಾಧೀಶರಾದ ಬಿಆರ್ ಗವಾಯಿ ಹಾಗೂ ನ್ಯಾಯಾಧೀಶರಾದ ಸಂದೀಪ್ ಮೆಹ್ತಾ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಜೊತೆಗೆ ಅರ್ಜಿದಾರರಿಗೆ ನಿಷ್ಪ್ರಯೋಜಕ ಪಿಐಎಲ್ ಸಲ್ಲಿಸುವುದು ಹವ್ಯಾಸವಾಗಿದ್ದು, ಆ ಸಾಲಿಗೆ ಇವರ ಅರ್ಜಿಯೊಂದು ಸೇರ್ಪಡೆಯಾಗಿದೆ ಎಂದು ಹೇಳಿದ್ದಾರೆ.
ಪಿಐಎಲ್ ಸಲ್ಲಿಸಿದಾಗ ಹಲವು ಬಾರಿ ಅರ್ಜಿದಾರರನ್ನು ಕರೆದಾಗಲೂ ಅವರು ಗೈರಾಗಿದ್ದರು. ಅರ್ಜಿದಾರರು ನಿಷ್ಪ್ರಯೋಜಕ ಪಿಐಎಲ್ ಗಳನ್ನು ಸಲ್ಲಿಸುವ ಹವ್ಯಾಸ ಹೊಂದಿದ್ದು, ಇದರಿಂದ ಕೋರ್ಟ್ ನ ಅಮೂಲ್ಯವಾದ ಸಮಯ ಹಾಗೂ ನೋಂದಣಿ ಕೂಡ ವ್ಯರ್ಥವಾಗುತ್ತದೆ. ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿ, ಒಂದು ಲಕ್ಷ ರೂ. ದಂಡ ವಿಧಿಸುತ್ತಿರುವುದಾಗಿ ಸುಪ್ರೀಂಕೋರ್ಟ್ ಆದೇಶಿಸಿದೆ.