ನವದೆಹಲಿ, ಜ 20 (DaijiworldNews/HR): ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರು ಆಂಧ್ರ ಪ್ರದೇಶದಲ್ಲಿ ಇಂದು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ನವೆಂಬರ್ ತಿಂಗಳಿನಲ್ಲಿ ರಶ್ಮಿಕಾ ಅವರ ಡೀಪ್ಫೇಕ್ ವೀಡಿಯೋ ವೈರಲ್ ಆಗಿದ್ದು, ಅದರಲ್ಲಿ ಕಪ್ಪು ವರ್ಕೌಟ್ ಉಡುಪು ಧರಿಸಿದ್ದ ಬ್ರಿಟಿಷ್-ಭಾರತೀಯ ಇನ್ಫ್ಲೂಯೆನ್ಸರ್ ಝಾರಾ ಪಟೇಲ್ ಅವರ ಮುಖವನ್ನು ಎಡಿಟ್ ಮಾಡಿ ರಶ್ಮಿಕಾ ಮುಖ ತೋರಿಸಲಾಗಿತ್ತು.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 467 ಮತ್ತು 469 ಹಗೂ ಐಟಿ ಕಾಯಿದೆ 20000 ಇದರ ಸೆಕ್ಷನ್ 66ಸಿ ಹಾಗೂ 66ಇ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದು, ಇದೀಗ ಓರ್ವ ಪೊಲೀಸರ ಬಲೆಗೆ ಬಿದ್ದಿದ್ದಾನೆ.