ನವದೆಹಲಿ, ಜ 21 (DaijiworldNews/PC): ಹಠ ಹಾಗೂ ಕಠಿಣ ಪ್ರಯತ್ನದಿಂದ ಪಟ್ಟರೆ ಎಲ್ಲವೂ ಸಾಧ್ಯ ಎಂಬ ಮಾತಿನಂತೆ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ UPSC ಪರೀಕ್ಷೆಯನ್ನು ಯಾವುದೇ ಕೋಚಿಂಗ್ ಪಡೆಯದೇ ಮೊದಲ ಪ್ರಯತ್ನದಲ್ಲೇ ಭೇದಿಸಿ IAS ಅಧಿಕಾರಿಯಾದ ಸಕ್ಷಮ್ ಗೋಯೆಲ್ ಕಥೆ ಇದಾಗಿದೆ.
ಆಗ್ರಾದಲ್ಲಿ ಹುಟ್ಟಿ ಬೆಳೆದ ಸಕ್ಷಮ್ ಗೋಯೆಲ್ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿ, 2015 ರಲ್ಲಿ ವಸಂತ್ ಕುಂಜ್ನ ದೆಹಲಿ ಪಬ್ಲಿಕ್ ಸ್ಕೂಲ್ನಿಂದ 12 ನೇ ತರಗತಿಯಲ್ಲಿ ಉತ್ತೀರ್ಣರಾದರು.
ಶಾಲಾ ಶಿಕ್ಷಣದ ನಂತರ, ಅವರು ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಲು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿಗೆ ಹೋದರು. ಅವರು ಕಾಲೇಜಿನಲ್ಲಿದ್ದಾಗಲೇ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದರು.
ದಿನಕ್ಕೆ 6 ರಿಂದ 7 ಗಂಟೆಗಳ ಕಾಲ ತಮ್ಮ ಅಧ್ಯಯನಕ್ಕೆ ಮೀಸಲಿಡುತ್ತಿದ್ದರು. ಅಷ್ಟೇ ಅಲ್ಲದೇ ಅವರು ಆನ್ಲೈನ್ ತರಗತಿಗಳಿಗೆ ಸೇರಿದರು ಹಾಗೂ ತನ್ನ ಸ್ವಯಂ-ಅಧ್ಯಯನದ ಮೇಲೆ ಹೆಚ್ಚಿನ ಒತ್ತನ್ನು ನೀಡಿದರು.
ಸಕ್ಷಮ್ ಗೋಯಲ್ ರವರು 2020 ರಲ್ಲೇ ಪರೀಕ್ಷೆಯನ್ನು ಬರೆಯಲು ಬಯಸಿದ್ದರು ಆದರೆ UPSE ಪರೀಕ್ಷೆ ಬರೆಯಲು ವಯಸ್ಸಿನ ಅರ್ಹತೆಯು 21 ಆದ್ದರಿಂದ ಅವರು ಒಂದುವರ್ಷ ಕಾಯಬೇಕಾಯಿತು. 2021ರಲ್ಲಿ ತನ್ನ ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು.
ಇವರು ತನ್ನ ಕಠಿಣ ಪ್ರಯತ್ನ ಹಾಗೂ ಪರಿಶ್ರಮದಿಂದ ಯಾವುದೇ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆಯದೇ ಅತ್ಯಂತ ಕಿರಿ ವಯಸ್ಸಿನಲ್ಲಿ UPSCಪರೀಕ್ಷೆಯನ್ನು ಉತ್ತೀರ್ಣರಾದ ಇವರ ಈ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗಿದೆ.