ಹಾಸನ,ಜ 21 (DaijiworldNews/PC): ಖಾಸಗಿ ಆಸ್ಪತ್ರೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿರುವ ಘಟನೆ ಹಾಸನ ಜಿಲ್ಲೆಯ ಶಂಕರಮಠ ರಸ್ತೆಯಲ್ಲಿರುವ ಮಂಜುನಾಥ ಆಸ್ಪತ್ರೆಯಲ್ಲಿ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಸ್ಪತ್ರೆಯ ಎಕ್ಸ್ರೇ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ರೋಗಿಗಳನ್ನು ಕುಟುಂಬಸ್ಥರು ಹೊರ ಕರೆತಂದಿದ್ದಾರೆ. ಬೆಂಕಿ ಕಾಣಿಸಿಕೊಂಡಿದ್ದರಿಂದ ರೋಗಿಗಳು ಗಾಬರಿಗೊಂಡಿದ್ದಾರೆ.
ಕೂಡಲೇ ಕಿಟಕಿ ಗ್ಲಾಸ್ಗಳನ್ನ ಆಸ್ಪತ್ರೆ ಸಿಬ್ಬಂದಿ ಒಡೆದಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.