ತುಮಕೂರು, ಜ 21 (DaijiworldNews/ AK): ಜಾತಿಗಣತಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂದು ಸರಕಾರದ ಪ್ರತಿನಿಧಿಯಾಗಿ ಒತ್ತಾಯಿಸುತ್ತೇನೆ" ಎಂದರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ನಗರದಲ್ಲಿ ತಿಗಳರ ವಿದ್ಯಾಭಿವೃದ್ಧಿ ಸಂಘವು ನೂತನವಾಗಿ ನಿರ್ಮಿಸಿರುವ 'ವಿದ್ಯಾಸಿರಿ ಸಭಾಂಗಣ' ವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳ ಸ್ಥಿತಿಗತಿಯನ್ನು ಅಧ್ಯಯನ ನಡೆಸಿ, ಆ ಸಮುದಾಯಗಳ ಅಭಿವೃದ್ಧಿಗಾಗಿ ಜಾತಿಗಣತಿ ವರದಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತವಾಗುತ್ತಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲ ಸಮುದಾಯಗಳು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂಬುದು ಸರಕಾರದ ಆಶಯ. ಸರಕಾರವು ನೀತಿ ರೂಪಿಸುವಾಗ, ಬಜೆಟ್ ನೀಡುವಾಗ ವರದಿಗಳು ಅನುಕೂಲವಾಗುತ್ತವೆ. ಜಾತಿಗಣತಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂದು ಸರಕಾರದ ಪ್ರತಿನಿಧಿಯಾಗಿ ಒತ್ತಾಯಿಸುತ್ತೇನೆ" ಎಂದರು