ಅಯೋಧ್ಯೆ, ಜ 22 (DaijiworldNews/MS): ಹಲವು ಶತಮಾನಗಳ ಕಾಯುವಿಕೆಗೆ ಫಲ ಸಿಗುವ ಕ್ಷಣ ಸನ್ನಿಹಿತವಾಗಿದೆ. ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಪ್ರಾಣಪ್ರತಿಷ್ಟೆಯ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ರಾಮ ಮಂದಿರ ತಲುಪಿದ್ದಾರೆ.
ಮಧ್ಯಾಹ್ನ 12.20ರಿಂದ 12.45ರ ಅವಧಿಯಲ್ಲಿ ಅಭಿಜಿನ್ ಮಹೂರ್ತದಲ್ಲಿರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಐವರು ಮಾತ್ರ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಿಸಲಿದ್ದಾರೆ.
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಒಟ್ಟು ಹತ್ತು ಹಂತಗಳಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಆರು ಹಂತದಲ್ಲಿ ವಿಗ್ರಹದ ಕಣ್ಣು ತೆರೆಯಲಾಗುತ್ತದೆ. ಬಳಿಕ ಪ್ರಧಾನಿ ಮೋದಿಯವರು ವಿಗ್ರಹಕ್ಕೆ ನೇತ್ರೋನ್ಮಿಲನ ಕ್ರಿಯೆಯನ್ನು ನಡೆಸಿಕೊಡಲಿದ್ದಾರೆ. ಇದಾದ ಬಳಿಕ ಪ್ರಾರ್ಥನೆ ನೆರವೇರಲಿದೆ.