ನವದೆಹಲಿ, ಜ 22 (DaijiworldNews/HR): ಅಯೋಧ್ಯೆಯ ಬೀದಿಗಳಲ್ಲಿ ಇನ್ನು ಮುಂದೆ ಗುಂಡಿನ ಸದ್ದು, ಕರ್ಫ್ಯೂಗೆ ಇರುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅಯೋಧ್ಯೆಯ ಪರಿಕ್ರಮದಲ್ಲಿ ಇನ್ನು ಮುಂದೆ ಯಾರೂ ಅಡ್ಡಿಯಾಗುವುದಿಲ್ಲ. ಅಯೋಧ್ಯೆಯ ಗಲ್ಲಿಗಳು ಇನ್ನು ಮುಂದೆ ಗುಂಡುಗಳ ಶಬ್ದದಿಂದ ಪ್ರತಿಧ್ವನಿಸುವುದಿಲ್ಲ. ಕರ್ಫ್ಯೂ ಇರುವುದಿಲ್ಲ ಎಂದರು.
ಇನ್ನು ಅಯೋಧ್ಯೆಯಲ್ಲಿ ದೀಪೋತ್ಸವ ಮತ್ತು ರಾಮೋತ್ಸವ ನಡೆಯಲಿದೆ. ರಾಮ ಕೀರ್ತನೆಗಳು ಗಲ್ಲಿಗಳಲ್ಲಿ ಪ್ರತಿಧ್ವನಿಸುತ್ತವೆ. ಏಕೆಂದರೆ ಇಂದು ಇಲ್ಲಿ ರಾಮ್ ಲಲ್ಲಾ ಸ್ಥಾಪನೆಯು ರಾಮರಾಜ್ಯದ ಘೋಷಣೆಯನ್ನು ಸಹ ಸೂಚಿಸುತ್ತದೆ ಎಂದು ಹೇಳಿದ್ದಾರೆ.