ಕೋಲ್ಕತ್ತ, ಜ 22 (DaijiworldNews/SK): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಸರ್ವಧರ್ಮ ಸಮನ್ವಯ ರ್ಯಾಲಿಗೆ ನಗರದ ಕಾಳಿಘಾಟ್ ದೇವಸ್ಥಾನದಲ್ಲಿ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ಚಾಲನೆಯನ್ನು ನೀಡಿದರು.
ಈ ರ್ಯಾಲಿಯನ್ನು ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು, ತೃಣಮೂಲ ಕಾಂಗ್ರೆಸ್ ನ ನಾಯಕರು ಸೇರಿದಂತೆ ಹಲವು ನಾಯಕರೊಂದಿಗೆ ನಗರದ ಹಜ್ರಾ ಮೋರ್ನಿಂದ ‘ಸಂಗತಿ ಮಾರ್ಚ್’ ಆರಂಭಿಸಿದರು.
ಹಜ್ರಾ ಮೋರ್ನಿಂದ ರ್ಯಾಲಿಯನ್ನು ಪ್ರಾರಂಭಿಸಿರುವ ಬ್ಯಾನರ್ಜಿ, ಮಸೀದಿಗಳು, ಚರ್ಚ್ಗಳು ಮತ್ತು ಗುರುದ್ವಾರಗಳು ಸೇರಿದಂತೆ ವಿವಿಧ ಧರ್ಮಗಳನ್ನು ಪ್ರತಿನಿಧಿಸುವ ವಿವಿಧ ಪೂಜಾ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ನಂತರ ನಗರದ ಪಾರ್ಕ್ ಸರ್ಕಸ್ ಮೈದಾನದಲ್ಲಿ ಬೃಹತ್ ಸಮಾವೇಶದೊಂದಿಗೆ ರ್ಯಾಲಿ ಪೂರ್ಣಗೊಳ್ಳಲಿದೆ.