ಅಯೋಧ್ಯೆ,ಜ 23(DaijiworldNews/RA):ಸತತ 500 ವರ್ಷಗಳಿಗೂ ಅಧಿಕ ಹೋರಾಟದ ಅಂತಿಮ ಫಲವಾಗಿ ಸೋಮವಾರ ಅಯೋಧ್ಯೆಯಲ್ಲಿ ರಾಮ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿದೆ.
ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಬಳಿಕ ಆ ಒಂದು ಹಂತದಲ್ಲಿ ಉಡುಪಿಯ ಕೃಷ್ಣಮಠದ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗರ್ಭಗುಡಿಯಲ್ಲಿ ಮುಖ ಮುಚ್ಚಿಕೊಂಡರು ಅನ್ನುವುದು ಕುರಿತಾಗಿ ಎಲ್ಲೆಡೆ ಚರ್ಚೆ ಆಗುತ್ತಿದೆ.
ಸದ್ಯ ಈ ವಿಚಾರಕ್ಕೆ ಸ್ಪಷ್ಟನೆ ದೊರತಿದೆ.ದೇವರಿಗೆ ನೈವೇದ್ಯ ಮಾಡುವ ಸಂದರ್ಭ ದೇವರನ್ನು ನೋಡಬಾರದು ಎಂಬ ಶಾಸ್ತ್ರೀಯ ನಿಯಮ ಇದೆ ಎಂಬ ಮಾಹಿತಿ ಇದೆ.
ಇತ್ತ ಪ್ರಧಾನಿ ಮೋದಿಯವರು ರಾಮಲಲ್ಲಾನಿಗೆ ಭಕ್ಷ್ಯ ಮತ್ತು ಫಲಗಳನ್ನು ನೈವೇದ್ಯ ಮಾಡುತ್ತಿದ್ದರು.
ಈ ಸಂದರ್ಭ ಅಲ್ಲಿದ್ದ ಪೇಜಾವರ ಶ್ರೀಗಳು ತಮ್ಮ ಅಂಗವಸ್ತ್ರದಿಂದ ಮುಖ ಮುಚ್ಚಿಕೊಂಡರು.
ಜತೆಗೆ ವಿಧಿವಿಧಾನಗಳು ನಡೆಯುತ್ತಿದ್ದಾಗ ಅವರು ಮಂತ್ರೋಚ್ಛಾರಣೆಯನ್ನು ಮಾಡುತ್ತಿದ್ದರು. ಜತೆಗೆ, ಕೆಲ ಸಂದರ್ಭ ಪ್ರಧಾನಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದ ರೀತಿಯಾದ ದೃಶ್ಯವೂ ಕಂಡು ಬಂತು.