ನವದೆಹಲಿ,23 (Daijiworld News/AZM):ಇಂದು ದೇಶದ 117 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ನಡೆದಿದ್ದು, ಸರಾಸರಿ ಶೇ.65ರಷ್ಟು ಮತದಾನವಾಗಿದೆ.
ಜಮ್ಮು-ಕಾಶ್ಮೀರದ ಅನಂತನಾಗ್ ಕ್ಷೇತ್ರದಲ್ಲಿ ಇಂದು ಮೊದಲ ಹಂತದ ಮತದಾನ ನಡೆದಿದ್ದು, ಇಲ್ಲಿ ಅತೀ ಕಡಿಮೆ 15%ಗಿಂತಲೂ ಕಡಿಮೆ ಮತದಾನವಾಗಿರುವ ಅಂದಾಜು ಇದೆ. ಕೇರಳ, ಪಶ್ಚಿಮ ಬಂಗಾಳ, ಗೋವಾ, ತ್ರಿಪುರಾ ಮತ್ತು ಅಸ್ಸಾಮ್ ರಾಜ್ಯಗಳ ಲೋಕಸಭಾ ಕ್ಷೇತ್ರಗಳಲ್ಲಿ ಒಳ್ಳೆಯ ಮತದಾನವಾಗಿದೆ.
ಇನ್ನು ಕೆಲವೆಡೆ ಹಿಂಸಾತ್ಮಕ ಘಟನೆಗಳು ನಡೆದಿದೆ. ಪಶ್ಚಿಮ ಬಂಗಾಳದ ಬಲಿಗ್ರಾಂನ ಮುರ್ಶಿರಾಬಾದ್ನಲ್ಲಿ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಗಳ ನಡೆದಿದ್ದು ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.
ಮುರ್ಶಿರಾಬಾದ್ನ ದೊಮ್ಕಲ್ ನಗರಸಭೆಯಲ್ಲಿ ಮೂವರು ಅಪರಿಚಿತರು ನಾಡಾ ಬಾಂಬ್ ಸ್ಪೋಟಿಸಿದ್ದಾರೆ. ಇದಾದ ಬಳಿಕ ರಾಣಿ ನಗರದ ಮತಗಟ್ಟೆ ಸಂಖ್ಯೆ 27, 28ರಲ್ಲಿ ಅಧಿಕಾರಿಗಳ ಸಮೀಪವೇ ದುಷ್ಕರ್ಮಿಗಳು ಬಾಂಬ್ ಸ್ಪೋಟಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸಂಜೆ 5 ಗಂಟೆಯವರೆಗೆ ನಡೆದ ಮತದಾನದ ವಿವರ ಹೀಗಿದೆ:
ಕರ್ನಾಟಕ: 60.67%
ಕೇರಳ: 68.21%
ಅಸ್ಸಾಂ: 74.05%
ಬಿಹಾರ: 54.94%
ಗೋವಾ: 69.79%
ಗುಜರಾತ್: 57.69%
ಜಮ್ಮು-ಕಾಶ್ಮೀರ: 11.22%
ಮಹಾರಾಷ್ಟ್ರ: 54.52%
ಒಡಿಶಾ: 56.27%
ತ್ರಿಪುರಾ: 69.64%
ಉತ್ತರ ಪ್ರದೇಶ: 55.91%
ಪಶ್ಚಿಮ ಬಂಗಾಳ: 78.69%
ಛತ್ತೀಸ್ಗಡ: 61.38%
ದಾದ್ರ, ನಾಗರ್ ಹವೇಲಿ: 56.81%
ದಮನ್, ಡಿಯು: 64.82%