ದಾವಣಗೆರೆ, ಜ 28 (DaijiworldNews/HR): ಕಾಂಗ್ರೆಸ್ಗೆ ಹೋಗಿ ಬಂದಿರುವ ಬಗ್ಗೆ ಯಾವುದೇ ಪಾಪ ಪ್ರಜ್ಞೆಯಾಗಲಿ, ಪಶ್ಚಾತ್ತಾಪವಾಗಲಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿ ನನ್ನ ಮನೆ. ನಾವೇ ಕಟ್ಟಿದ ಮನೆಗೆ ವಾಪಸ್ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದರು.
ಇನ್ನು ಕೆಲವೊಂದು ಕಹಿ ಘಟನೆಗಳ ಕಾರಣಕ್ಕೆ ನನ್ನ ಮನೆ ತೊರೆದು ಹೋಗಿದ್ದೆ. ಈಗ ಮರಳಿ ಮನೆಗೆ ಬಂದಿದ್ದು ಖುಷಿಯಾಗಿದೆ. ಪಕ್ಷಕ್ಕೆ ಮರಳಲು ಯಾವುದೇ ಷರತ್ತು ವಿಧಿಸಿಲ್ಲ. ಬೇಷರತ್ತಾಗಿ ಪಕ್ಷಕ್ಕೆ ವಾಪಸಾಗಿದ್ದೇನೆ ಎಂದಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಕ್ಷದ ರಾಜ್ಯ ಹಾಗೂ ರಾಷ್ಟ್ರ ನಾಯಕರ ಆಹ್ವಾನದ ಮೇರೆಗೆ ಪಕ್ಷಕ್ಕೆ ಮರಳಿದ್ದೇನೆ ಎಂದು ಹೇಳಿದ್ದಾರೆ.