ಕಲಬುರಗಿ, ಜ 29 (DaijiworldNews/HR): ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ಕುರಿತಾಗಿ ಅಗೌರವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಯಿಯಲ್ಲಿ ರಾಷ್ಟ್ರಪತಿಯವರ ಕುರಿತಾಗಿ ಅವಹೇಳನಕಾರಿ ಮಾತು ಬಾಯಿತಪ್ಪಿ ಬಂದಿದೆ ಅಂತ ಅನಿಸುತ್ತಿಲ್ಲ. ಅದು ಅವರ ಅಂತರಾಳದ ಭಾವನೆಗಳನ್ನು ಮಾತಿನ ಮೂಲಕ ಹೊರ ಹಾಕಿದ್ದಾರೆ ಎಂದರು.
ಇನ್ನು ಸಿದ್ದರಾಮಯ್ಯ ಒಬ್ಬ ಅನುಭವಿ ಮುಖ್ಯಮಂತ್ರಿ ಅವರಿಂದ ರಾಷ್ಟ್ರಪತಿಗಳ ಬಗ್ಗೆ ಅಗೌರವ ಮಾತು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಮುಖ್ಯಮಂತ್ರಿ ಬಾಯಿಯಿಂದ ಯಾಕೆ ಈ ಮಾತು ಹೊರಡಿತು ಎನ್ನುವುದು ನಿಜವಾಗಿಯೂ ಆಶ್ವರ್ಯ ಮೂಡಿಸಿದೆ ಎಂದು ಹೇಳಿದ್ದಾರೆ.