ಪಟ್ನಾ, ಜ 30(DaijiworldNews/AK): ರಾಷ್ಟ್ರೀ ಯ ಜನತಾದಳ (ಆರ್ ಜೆ.ಡಿ) ನಾಯಕ ತೇಜಸ್ವಿ ಯಾದವ್ ಅವರು ಇಂದು ಇಡಿ ಕಚೇರಿಗೆ ಆಗಮಿಸಿ ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರದ ಮಾಜಿ ಉಪಮುಖ್ಯಮಂತ್ರಿ ಅವರು ಬೆಳಿಗ್ಗೆ ಸುಮಾರು 11.35ರ ಹೊತ್ತಿಗೆ ಇಡಿ ಕಚೇರಿಯನ್ನು ತಲುಪಿದರು ಎಂದು ಅವರ ತಿಳಿಸಿದರು.
ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಅವರ ತಂದೆ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಜಾರಿ ನಿರ್ದೇಶನಾಲಯದ
ಅಧಿಕಾರಿಗಳು ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಇದೀಗ ಕೇಂದ್ರ ತನಿಖಾ ಸಂಸ್ಥೆ ಜ.29 ರಂದು ಪ್ರಸಾದ್ ಹಾಗೂ ಅವರ ಪುತ್ರ ತೇಜಸ್ವಿ ಯಾದವ್ ಅವರಿಗೆ ವಿಚಾರಣೆಗಾಗಿ ಹೊಸದಾಗಿ ಸಮನ್ಸ್ ಜಾರಿಗೊಳಿಸಿತ್ತು.