ಬೆಂಗಳೂರು,ಜ30(DaijiworldNews/RA):ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ 15 ಅಡಿ ಎತ್ತರದ ಕಂಚಿನ ಪ್ರತಿಮೆ ಬೆಂಗಳೂರಿನ ಶೇಷಾದ್ರಿಪುರದಲ್ಲಿ ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದೆ.
ರಾಜ್ಯದಲ್ಲೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ರಾಜೀವ್ ಗಾಂಧಿಯವ ಈ ಪ್ರತಿಮೆ ಪಾತ್ರವಾಗಲಿದ್ದು ಜಂಕ್ಷನ್ ಗಳ ಅಭಿವೃದ್ಧಿ ಯೋಜನೆಯಡಿ ಬಿಬಿಎಂಪಿ ನಗರದಲ್ಲಿ 25 ಜಂಕ್ಷನ್ ಳನ್ನು ಅಭಿವೃದ್ಧಿ ಮಾಡುತ್ತಿದ್ದು, ಶೇಷಾದ್ರಿಪುರ, ಪ್ಲಾಟ್ಫಾರ್ಮ್ ರಸ್ತೆ ಹಾಗೂ ಸಂಪಿಗೆ ರಸ್ತೆ ಸೇರುವ ಜಂಕ್ಷನ್ನಲ್ಲಿ ‘ರಾಜೀವ್ ಗಾಂಧಿ ಸ್ಕ್ವೇರ್’ ಇದರ ನಿರ್ಮಾಣವನ್ನು ಮಾಡಲಾಗುತ್ತಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದ್ದು ಬಿಬಿಎಂಪಿ ವತಿಯಿಂದ 1.5 ಕೋಟಿ ವೆಚ್ಚದಲ್ಲಿ ಜಂಕ್ಷನ್ ಅಭಿವೃದ್ಧಿ ಮಾಡಲಾಗುತ್ತಿದೆ.
1.25 ಕೋಟಿ ವೆಚ್ಚದಲ್ಲಿ ಸ್ಥಾಪನೆಗೆ ಡಿಸಿಎಂ ತಮ್ಮ ಅನುದಾನದಲ್ಲಿ ಹಣ ಬಿಡುಗಡೆ ಮಾಡಿದ್ದಾರೆ’ ಎಂದು ಬಿಬಿಎಂಪಿಯ ಸಂಚಾರ ಎಂಜಿನಿಯರಿಂಗ್ ಕೋಶದ ಎಂಜಿನಿಯರ್ ಗಳು ಮಾಹಿತಿ ನೀಡಿದ್ದಾರೆ.
ಪ್ರತಿಮೆಯ ಸುತ್ತ ಘೋಷವಾಕ್ಯಗಳಿದ್ದು, ಅವುಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿದೆ.
ಇದು ಮುಕ್ತ ಜಂಕ್ಷನ್ ಆಗಿದ್ದು, ಮೆಟ್ಟಿಲುಗಳ ಮೇಲೆ ನಾಗರಿಕರು ವಿರಮಿಸಲು ಅವಕಾಶವಿರುತ್ತದೆ. ಸುತ್ತಲೂ ಗಿಡಮರಗಳು ಸೇರಿದಂತೆ ಆಲಂಕಾರಿಕ ಸೌಲಭ್ಯಗಳನ್ನೂ ಮಾಡಲಾಗುತ್ತದೆ’ ಎಂದು ಮಾಧ್ಯಮಳಿಗೆ ಎಂಜಿನಿಯರ್ಗಳು ಮಾಹಿತಿ ನೀಡಿದರು.