ಪೂರ್ನಿಯಾ, ಜ 30 (DaijiworldNews/HR): ಇಂಡಿಯಾ ಒಕ್ಕೂಟಕ್ಕೆ ನಿತೀಶ್ ಕುಮಾರ್ ಅವರ ಅಗತ್ಯವೇ ಇಲ್ಲ ಎಂದು ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮೈತ್ರಿಕೂಟ ತೊರೆದ ಸಂದರ್ಭದಲ್ಲಿ ಕೊಂಚ ಆತಂಕ ಉಂಟಾದದ್ದು ಹೌದು. ಬಿಜೆಪಿ ಜತೆಗೆ ಮತ್ತೆ ಮೈತ್ರಿ ಮಾಡಿಕೊಂಡಿರುವ ಅವರ ವರ್ತನೆ ಹೊಸತೇನಲ್ಲ. ಬಿಹಾರದಲ್ಲಿ ಸಾಮಾಜಿಕ ನ್ಯಾಯ ನೀಡುವುದೇ ಮಹಾಮೈತ್ರಿಕೂಟದ ಉದ್ದೇಶ ಎಂದರು.
ಇನ್ನು ಇಂಡಿಯಾ ಒಕ್ಕೂಟಕ್ಕೆ ನಿತೀಶ್ ಕುಮಾರ್ ಅವರ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ.