ಮಂಡ್ಯ,ಏ24(Daijiworld News/AZM):ಮತದಾನದ ಬಳಿಕ ಮಂಡ್ಯದಲ್ಲಿ ಭಾರೀ ಜೋರಾಗಿ ನಡೆಯುತ್ತಿರುವ ಚುನಾವಣಾ ಬೆಟ್ಟಿಂಗ್ ಅನ್ನು ಮಂಡ್ಯ ಲೋಕಸಭೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರು ಕೂಡಾ ಖಂಡಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಚುನಾವಣೆ ಫಲಿತಾಂಶದ ಮೇಲೆ ಬೆಟ್ಟಿಂಗ್ ಮಾಡಬೇಡಿ, ಇದನ್ನು ನಾನು ಖಂಡಿಸುವೆ ಎಂದು ಹೇಳಿದ್ದಾರೆ. ನಾನು ಕಾಂಗ್ರೆಸ್ ಸಹಕಾರದಿಂದ ಚುನಾವಣೆ ಎದುರಿಸಿದ್ದೇನೆ, ಹೀಗಾಗಿ ನಾನು ಎಲ್ಲರಿಗೂ ಧನ್ಯವಾದ ಅರ್ಪಿಸುವೆ ಎಂದು ನಿಖಿಲ್ ಹೇಳಿದ್ದಾರೆ. ದ್ವೇಷದ ರಾಜಕಾರಣ ನಮ್ಮಕುಟುಂಬಕ್ಕೆ ಅನಿವಾರ್ಯವಲ್ಲ, ಇನ್ನೂ ನಮ್ಮ ವಿರೋಧಿಗಳು ಆರೋಪ ಮಾಡುವುನ್ನು ನಿಲ್ಲಿಸಿಲ್ಲ, ಆದರೆ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಲ್ಲ ಎಂದರು.
ಮಂಡ್ಯದ ಜನ ನಮ್ಮ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.