ನವದೆಹಲಿ,ಏ24(Daijiworld News/AZM): ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದಿನ ಮೇಲಿದ್ದ ನಿಷೇಧವನ್ನು ಭಾರತ ಮುಂದುವರೆಸಿದ್ದು, ಮುಂದಿನ ಮೂರು ತಿಂಗಳವರೆಗೆ ಚೀನಾದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದು ಇಲ್ಲ ಎಂದು ಸ್ಪಷ್ಟಪಡಿಸಿದೆ.
ಚೀನಾದಿಂದ ಆಮದಾಗುವ ಕ್ಷೀರ ಉತ್ಪನ್ನಗಳಲ್ಲಿ ಪ್ಲಾಸ್ಟಿಕ್ ಹಾಗೂ ರಸಗೊಬ್ಬರಗಳ ತಯಾರಿಕೆಗೆ ಬಳಸುವ ಮೆಲಾಮೈನ್ ಎಂಬ ಹಾನಿಕಾರಕ ರಾಸಾಯನಿಕ ಅಂಶ ಕಂಡು ಬಂದಿರುವ ಹಿನ್ನೆಲೆಯಲ್ಲಿ ಆಮದನ್ನು ನಿಷೇಧಿಸಲಾಗಿತ್ತು.
2008ರಲ್ಲಿ ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮೊದಲ ಬಾರಿಗೆ ಭಾರತ ನಿಷೇಧಿಸಿತ್ತು. ಹಾಗೂ 2018ರ ಡಿಸೆಂಬರ್ 24ರಂದು ಈ ಉತ್ಪನ್ನಗಳ ಮೇಲಿನ ನಿರ್ಬಂಧಗಳನ್ನು ಹಿಂಪಡೆದಿತ್ತು. ಆದರೆ ಇದೀಗ ಮತ್ತೆ ನಿಷೇಧವನ್ನು ಮುಂದುವರೆಸಿರುವ ಭಾರತ, ಇಂದು ಸಂಜೆಯಿಂದಲೇ ನಿಷೇಧದ ಆದೇಶ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದೆ. ಆಮದು ನಿಷೇಧಕ್ಕೆ ಒಳಪಟ್ಟಿರುವ ಹಾಲಿನ ಉತ್ಪನ್ನಗಳಲ್ಲಿ ಚಾಕೊಲೇಟ್, ಕ್ಯಾಂಡಿ, ಕನ್ಫೆಕ್ಷನರಿ ಮತ್ತಿತರ ಪದಾರ್ಥಗಳು ಸೇರಿವೆ.