ನವದೆಹಲಿ, ಫೆ 01 (DaijiworldNews/MS): ತೈಲ ಮಾರುಕಟ್ಟೆ ಕಂಪನಿಗಳು ಫೆಬ್ರವರಿ 1 ರಂದು ಎಲ್.ಪಿ.ಜಿಯಿಂದ ಎಟಿಎಫ್ ದರಗಳನ್ನು ನವೀಕರಿಸಿವೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ₹14 ಹೆಚ್ಚಳವಾಗಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಪ್ರತಿ ತಿಂಗಳ ಮೊದಲನೆಯ ದಿನದಂದು ಅಡುಗೆ ಅನಿಲ ಮತ್ತು ATF ಬೆಲೆಗಳನ್ನು ಹಿಂದಿನ ತಿಂಗಳ ಸರಾಸರಿ ಅಂತರರಾಷ್ಟ್ರೀಯ ಬೆಲೆಯನ್ನು ಆಧರಿಸಿ ಪರಿಷ್ಕರಿಸುತ್ತವೆ.
ಎಲ್ಪಿಜಿ ಸಿಲಿಂಡರ್ ಇಂದಿನಿಂದ ₹1869ರ ಬದಲು ₹1887ಕ್ಕೆ ಲಭ್ಯವಿರುತ್ತದೆ. ದರವು 19 ಕೆಜಿ ವಾಣಿಜ್ಯ ಸಿಲಿಂಡರ್ ಗಳಿಗೆ ಮಾತ್ರ ಅನ್ವಯವಾಗಲಿದೆ. 14.2 ಕೆಜಿ ದೇಶೀಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.